ದಿನದ ಸುದ್ದಿ

ಮೈಸೂರು ಮಹಾನಗರ ಪಾಲಿಕೆಯ ನೂತನ ಮೇಯರ್ ತಸ್ನಿಮ್ ಬಗ್ಗೆ ನಿಮಗೆಷ್ಟು ಗೊತ್ತು?

Published

on

ಸುದ್ದಿದಿನ,ಮೈಸೂರು : ಮೈಸೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಜೆಡಿಎಸ್ ನ ತಸ್ನಿಮ್ ಆಯ್ಕೆಯಾಗಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಂ ಮಹಿಳೆ ಮೇಯರ್ ಆಗಿ ಆಯ್ಕೆಯಾಗಿದ್ದು, 47 ಮತಗಳಿಂದ ತಸ್ನಿಮ್ ಪಾಲಿಕೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮುಸ್ಲಿಂ ಮಹಿಳಾ ಮೇಯರ್ ಆಗಿ ಅಧಿಕಾರ ನಡೆಸಲಿದ್ದಾರೆ.

ತಸ್ನಿಮ್ 47 ಮತಗಳನ್ನು ಪಡೆದಿದ್ದು, ಬಿಜೆಪಿಯ ಗೀತಾ ಯೋಗಾನಂದ್ 23 ಮತಗಳನ್ನು ಪಡೆದಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಂ ಮಹಿಳೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. 22 ನೇ ಅವಧಿಗೆ ಮೇಯರ್ ಆಗಿ ತಸ್ನೀಮ್ ಅಧಿಕಾರ ಪಡೆದಿದ್ದಾರೆ. ಮುಸ್ಲಿಂ ಮಹಿಳಾ ಮೇಯರ್ ಆಗಿ ತಸ್ನೀಮ್ ಅಧಿಕಾರ ಮುನ್ನೆಡೆಸಲಿದ್ದಾರೆ.

ತಸ್ನೀಮ್ ಓದಿದ್ದು ಬಿಎ, ಪತಿ ಸಯ್ಯದ್ ಸಮೀಉಲ್ಲಾ ಎರಡನೇ ಬಾರಿಗೆ ಪಾಲಿಕೆ ಸದಸ್ಯೆಯಾಗಿ ಆಯ್ಕೆ. ಮಾವ ನಸೀರ್ ಉದ್ದಿನ್ 4 ಬಾರಿ ಮೀನಾ ಬಜಾರ್ ವಾರ್ಡ್ ನಲ್ಲಿ ಪಾಲಿಕೆ ಸದಸ್ಯರಾಗಿದ್ರು. ನಂತರ 26 ವಾರ್ಡ್ ಮಹಿಳಾ ಮೀಸಲಾತಿ ಹಿನ್ನಲೆಯಲ್ಲಿ ಮಾವ ಸೊಸೆಗೆ ಸ್ಥಾನ ಬಿಟ್ಟುಕೊಟ್ಟಿದ್ದರು.

ಕೃಪೆ : ಸುದ್ದಿಟೈಮ್ಸ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version