ಲೈಫ್ ಸ್ಟೈಲ್
ದೇಶಾಭಿಮಾನಕ್ಕೂ ಟ್ಯಾಟೂ..!
ಆಗಸ್ಟ್ ತಿಂಗಳು ಬಂತೆಂದರೆ ಸಾಕು ಎಲ್ಲೆಲ್ಲೂ ಕೇಸರಿ-ಬಿಳಿ-ಹಸಿರ ಛಾಯೆ. ಭಾರತದ ಎಪ್ಪತ್ತೆರಡೆನೆಯ ಸ್ವತಂತ್ರ ದಿನಾಚರಣೆ ಸಂದರ್ಭದಲ್ಲಿ ದೇಶಪ್ರೇಮದ ಪ್ರತೀಕವಾಗಿ ತಿರಂಗ ದರ್ಬಾರು ಶುರುವಾಗಿದೆ. ಸ್ವತಂತ್ರ ಭಾರತದ ರಾಷ್ಟ್ರ ಹಬ್ಬಕ್ಕೆ ಇಡೀ ದೇಶವೇ ತಿರಂಗ ಬಣ್ಣಗಳಲ್ಲಿ ಅಲಂಕೃತಗೊಂಡಿದೆ.
ದೇಶಾಭಿಮಾನ ಸಾರುವ ಟ್ಯಾಟೂ ಕ್ರೇಜ್ !
ಈಗಂತೂ ಟ್ಯಾಟೂ ಕ್ರೇಜ್ ಜನರಲ್ಲಿ ಹೆಚ್ಚಿದೆ. ಶಾಶ್ವತ ಟ್ಯಾಟೂಗಳ ಮುಖಾಂತರ ನಮ್ಮ ವ್ಯಕ್ತಿತ್ವ ಪರಿಚಯ ಮಾಡಿಕೊಡುತ್ತೇವೆ ಅನ್ನುವುದು ಕೆಲ ಟ್ಯಾಟೂ ಪ್ರಿಯರ ಅಭಿಪ್ರಾಯ. ಬಣ್ಣ ಬಣ್ಣದ ಆಕರ್ಷಕ ವಿನ್ಯಾಸದಲ್ಲಿ ಟ್ಯಾಟೂ ರಚಿಸಿಕೊಳ್ಳುವ ಕ್ರೇಜ್ ಹೆಚ್ಚಿದೆ. ಸ್ವತಂತ್ರ ದಿನಾಚರಣೆ ಸಂದರ್ಭದಲ್ಲಿ ಕೆಲ ವಿಶಿಷ್ಟ ಬಗೆಯ ದೇಶಾಭಿಮಾನ ಸಾರುವ ಟ್ಯಾಟೂ ಕ್ರೇಜ್ ಜನರಲ್ಲಿ ಹೆಚ್ಚಿದೆ. ತಲೆಯೊಳಗೆ ಅಡಗಿಸಿಟ್ಟಿದ್ದ ದೇಶಾಭಿಮಾನವನ್ನ ಎದೆಯ ಮೇಲೆ, ಕೈ-ಬೆನ್ನಿನ ಮೇಲೆ ದೇಶಪ್ರೇಮದ ಟ್ಯಾಟೂ ಗಳ ಮೂಲಕ ವ್ಯಕ್ತ ಪಡಿಸಲಾಗುತ್ತಿದೆ.
ಭಾರತದ ಧ್ವಜ, ಅಶೋಕ ಚಕ್ರ, ಭಾರತದ ನಕ್ಷೆ, ರಾಷ್ಟ್ರ ಪಕ್ಷಿ ನವಿಲು, ಪ್ರಾಣಿ ಹುಲಿ, ರಾಷ್ಟ್ರ ಲಾಂಚನ.. ಹೀಗೆ ದೇಶಪ್ರೇಮದ ಟ್ಯಾಟೂಗಳು ಪ್ರಸ್ತುತ ಸೋಷಿಯಲ್ ಮೀಡಿಯಾ ದಲ್ಲಿ ಈಗ ವೈರಲ್ ಆಗಿದೆ.