ದಿನದ ಸುದ್ದಿ
ದಾವಣಗೆರೆ | ಆಸ್ತಿ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸುವ ಸುವರ್ಣಾವಕಾಶ
ಸುದ್ದಿದಿನ,ದಾವಣಗೆರೆ : ಹರಿಹರ ನಗರಸಭೆ ವ್ಯಾಪ್ತಿಯ ಸಮಸ್ತ ಆಸ್ತಿ ಮಾಲೀಕರುಗಳಿಗೆ ತಿಳಿಯಪಡಿಸುವುದೇನೆಂದರೆ, 2022-23 ನೇ ಸಾಲಿನ ಏ.01 ರಿಂದ ಪ್ರಾರಂಭ ವಾಗಿದ್ದು ನಿಮ್ಮ ಮಾಲೀಕತ್ವದಲ್ಲಿರುವ ಆಸ್ತಿಗಳ ಆಸ್ತಿ ತೆರಿಗೆಯನ್ನು ಮೇ.01 ರಿಂದ ದಿನಾಂಕ: ಮೇ.30 ರೊಳಗಾಗಿ ದಂಡ ರಹಿತವಾಗಿ ಪಾವತಿಸಲು ಅವಕಾಶವಿರುತ್ತದೆ.
ತಪ್ಪಿದ್ದಲ್ಲಿ ಪ್ರತಿ ತಿಂಗಳು ಶೇ2% ರಷ್ಟು ದಂಡವನ್ನು ವಿಧಿಸಲಾಗುವುದು ಆದ್ದರಿಂದ ನಿಮ್ಮ ಆಸ್ತಿಯ ಆಸ್ತಿ ತೆರಿಗೆ, ನೀರಿನ ತೆರಿಗೆ, ಮಳಿಗೆ ಬಾಡಿಗೆ, ಟ್ರೇಡ್‍ಲೈಸನ್ಸ್ ಫೀ, ಜಾಹಿರಾತು ಶುಲ್ಕಗಳನ್ನು ಪಾವತಿಸಿ ಆಸ್ತಿ ತೆರಿಗೆಯ ಮೇಲೆ ದಂಡ ರಹಿತ ಸದುಪಯೋಗ ಪಡೆದುಕೊಳ್ಳುವಂತೆ ಹರಿಹರ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243