ದಿನದ ಸುದ್ದಿ
ಶಾಲಾ ಮಕ್ಕಳಿಗಾಗಿ ಬಸ್ ಖರೀದಿಸಿದ ಶಿಕ್ಷಕ
ಸುದ್ದಿದಿನ ಡೆಸ್ಕ್ : ಉಡುಪಿಯ ಶಿಕ್ಷಕನೊಬ್ಬ ಶಾಲಾ ಮಕ್ಕಳಿಗಾಗಿ ಬಸ್ಸನ್ನೇ ಖರೀದಿಸಿ ಅವರೇ ಚಾಲಕರಾಗಿದ್ದಾರೆ. ಸಾರಿಗೆ ಸಮಸ್ಯೆಯಿಂದ ಶಾಲೆ ಬಿಡುತ್ತಿದ್ದ ಮಕ್ಕಳು ಅನುಕೂಲಕ್ಕಾಗಿ ಬಸ್ ಖರೀದಿಸಿದ್ದಾರೆ.
ಉಡುಪಿ ಜಿಲ್ಲೆಯ ಬ್ರಹ್ಮವಾರ್ ತಾಲೂಕಿನ ಬಾರಳಿ ಸರ್ಕಾರಿ ಪ್ರಾಥಮಿಕ ಶಾಲಾ ವಿಜ್ಞಾನ ಶಿಕ್ಷಕ ರಾಜರಾಮ ಟೆಂಪಲ್ ಟ್ರಾವೆಲ್ ಖರೀದಿಸಿ ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆತರುವುದು ಮತ್ತು ಶಾಲೆಯಿಂದ ಮನೆಗೆ ಬಿಡುವಂತ ನಿತ್ಯ ಕಾಯಕ ಮಾಡುತ್ತಿದ್ದಾರೆ.
ಮಕ್ಕಳು ಬಾರಳಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಬರಲು ಕಷ್ಟಪಡುತ್ತಿದ್ದರು. ಇನ್ನು ಕೆಲವು ಮಕ್ಕಳು ಶಾಲೆಯಿಂದ ದೂರ ಉಳಿಯುತ್ತದ್ದರು. ಇದನ್ನು ತಪ್ಪಿಸಲು ಶಾಲೆಯ ಹಳೆಯ ವಿದ್ಯಾರ್ಥಿ ವಿಜಯ ಹೆಗ್ಡೆ ಮತ್ತು ಗಣೇಶ್ ಶೆಟ್ಟಿ ಬಸ್ ಖರೀದಿಸಿ ಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ.
ಆದರೆ, ಚಾಲಕನ ನೇಮಿಸಲು ಹಣಕಾಸಿನ ಕೊರತೆಯಿಂದ ಶಿಕ್ಷಕ ರಾಜರಾಮ ಅವರೇ ಶಾಲಾ ವಾಹನದ ಚಾಲಕರಾಗಿದ್ದಾರೆ. ವಾಹನ ಇನ್ಶುರೆನ್ಸ್, ಡೀಸೆಲ್ ಗೆ ಹಣವನ್ನು ಸ್ವಂತ ಹಾಕುತ್ತಿದ್ದಾರೆ. ಇದಕ್ಕಾಗಿ ಲೈಸೆನ್ಸ್ ಪಡೆದುಕೊಂಡಿದ್ದಾರೆ. ಇದರಿಂದ 50ರಿಂದ 90ಕಕ್ಕೆ ಶಾಲಾ ಮಕ್ಕಳ ಸಂಖ್ಯೆ ಏರಿದೆ. ದಿನವೂ ಬೆಳಗ್ಗೆ 9.20 ಮಕ್ಕಳನ್ನು ಕರೆದುಕೊಂಡು ಬರುವುದು ಮತ್ತು ಹೋಗುವ ಕೆಲಸವನ್ನೂ ಮಾಡುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401