ದಿನದ ಸುದ್ದಿ
ಪಾಠ ಜೋರಾಗಿ ಓದಲಿಲ್ಲವೆಂದು ಕಣ್ಣಿಗೆ ಪೆನ್ನು ಚುಚ್ಚಿದ ಶಿಕ್ಷಕ; ಪೊಲೀಸರಿಂದ ಬಂಧನ
ಸುದ್ದಿದಿನ ಡೆಸ್ಕ್: ಮಕ್ಕಳು ಬುದ್ದಿ ಕಲಿಯಲೆಂದು ದಂಡಿಸೋದು ಒಳ್ಳೆಯದು. ತನ್ನ ಸಿಟ್ಟು, ದರ್ಪ ತೋರಿಸೋದು ಎಷ್ಟರ ಮಟ್ಟಿಗೆ ಸರಿ. ಮಗುವಿನ ಕಣ್ಣಿಗೆ ಫೌಂಟೇನ್ ಪೆನ್ ಚುಚ್ಚಿ ಬಿಟ್ಟಿದ್ದಾನೆ. ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಶಷಾಜನಪುರದ ಸರ್ಕಾರಿ ಶಾಲೆಯಲ್ಲಿ.
ಸರ್ಕಾರಿ ಶಾಲೆಯ ಏಳು ವರ್ಷದ ಶಾಲಾ ವಿದ್ಯಾರ್ಥಿ ಲವಕುಶ ಪಾಠವನ್ನು ಜೋರಾಗಿ ಓದದಿದ್ದರಿಂದ ಸಿಟ್ಟಿಗೆದ್ದ ಶಿಕ್ಷಕ ಪೆನ್ನಿನಿಂದ ಕಣ್ಣಿಗೆ ತಿವಿದು ಬಿಟ್ಟಿದ್ದಾನೆ. ಇದರಿಂದ ಕಣ್ಣಿನಲ್ಲಿ ರಕ್ತ ದಳ ದಳನೆ ಸುರಿತ್ತಿದ್ದು, ಬಾಲಕನ ದೃಷ್ಟಿ ಹೋಗಿ ಬಿಟ್ಟಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಶಾಲೆಯ ಶಿಕ್ಷಕರು ವೈದ್ಯಕೀಯ ವೆಚ್ಚ ಭರಿಸುವುದಾಗಿ ಒಪ್ಪಿಕೊಂಡಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕನ ತಂದೆಯ ದೂರು ಆಧರಿಸಿ ಶಿಕ್ಷಕನನ್ನು ಬಂಧಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401