ದಿನದ ಸುದ್ದಿ

ಶರ್ಮತ್.ಐ.ಕಣದಮನಿ ನವಿಲೇಹಾಳ್ ಅವರಿಗೆ ‘ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’

Published

on

ಸುದ್ದಿದಿನ,ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ,ನಿಂಬಳಗೆರೆಯ ಶ್ರೀ.ಬಿ.ಕೆ.ವಿ.ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕರಾದ ಶರ್ಮತ್.ಐ.ಕಣದಮನಿ ನವಿಲೇಹಾಳ್ ಅವರಿಗೆ2020-21ನೇ ಸಾಲಿನ 70ನೇ ಗಣರಾಜ್ಯೋತ್ಸವದ ಪ್ರಯುಕ್ತ ಲಿಂಗೈಕ್ಯೆ ಶ್ರೀ. ಉದಯಸಿಂಗ್ ಲಾಡ್ ಪ್ರತಿಷ್ಠಾನ ಸಂಡೂರು,ಬಳ್ಳಾರಿ ಇವರ ಸ್ಮರಣಾರ್ಥವಾಗಿ ನಿಂಬಳಗೆರೆಯ “ಗ್ರಾಮ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಲಭಿಸಿದೆ.

2019-20 ಸಾಲಿನಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆಯ ಅಂಗವಾಗಿ “ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ” ಲಭಿಸಿರುವುದಲ್ಲದೆ ಈ ಬಾರಿಯೂ ಕೂಡ ಅಂದರೆ 2020-21ನೇ ಸಾಲಿನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ132 ನೇ ಜನ್ಮದಿನಾಚರಣೆಯ ಅಂಗವಾಗಿ ಶನಿವಾರ ಬಿ.ಡಿ.ಎ.ಪುಟ್ಬಾಲ್ ಮೈದಾನ(ಸಭಾಂಗಣ),ಬಳ್ಳಾರಿಯ ಪ್ರೌಢಶಾಲಾ ವಿಭಾಗದಲ್ಲಿ “ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ” ಪ್ರದಾನ ಮಾಡುವುದರ ಮೂಲಕ ಶಿಕ್ಷಕರ ದಿನಾಚರಣೆಯ ದಿನದಂದು ಉತ್ತಮ ಶಿಕ್ಷಕರನ್ನು ಗುರುತಿಸಿ ಗೌರವಿಸಲಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version