ಕ್ರೀಡೆ

ಹಲವು ನಾಯಕರ ದಾಖಲೆ ಮುರಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ..!

Published

on

ಸುದ್ದಿದಿನ,ಅಹಮದಾಬಾದ್: ಭಾರತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವನ್ನು 3-1 ಅಂತರದಲ್ಲಿ ಗೆದ್ದ ಸಂಭ್ರಮದಲ್ಲಿರುವಂತೆಯೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕನಾಗಿ ದಿಗ್ಗಜ ನಾಯಕರ ದಾಖಲೆಯನ್ನು ಮುರಿದಿದ್ದಾರೆ.

ಭಾರತ ತಂಡವು ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಇನ್ನಿಂಗ್ಸ್ ಮತ್ತು 25 ರನ್ ಗಳ ಜಯ ಸಾಧಿಸುತ್ತಿದ್ದಂತೆ. ನಾಯಕನಾಗಿ ಕೊಹ್ಲಿ ತವರಿನಲ್ಲಿ 23 ನೇ ಗೆಲುವಿನ ನಗೆಯನ್ನು ಬೀರಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ದಿಗ್ಗಜ ನಾಯಕರಾದ ಸ್ಟೀವ್ ವ್ಹಾ ಮತ್ತು ವೆಸ್ಟ್ ಇಂಡೀಸ್ ನ ಕ್ಲೈವ್ ಲಾಯ್ಡ್ ದಾಖಲೆಯ ಮುರಿದು ಮುಂದಿದ್ದಾರೆ.

ವಿರಾಟ್ ಕೊಹ್ಲಿ ತವರಿನಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ನಲ್ಲಿ 23ನೇ ಗೆಲುವು ದಾಖಲಿಸುವುದರ ಮೂಲಕ ಸ್ಟೀವ್ ವ್ಹಾ ದಾಖಲೆ ಮುರಿದು ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡರೆ ಮೊದಲ ಸ್ಥಾನದಲ್ಲಿ 30 ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ನಾಯಕ ಗ್ರೇಮ್ ಸ್ಮಿತ್ ರಾರಾಜಿಸುತ್ತಿದ್ದಾರೆ. 29 ಗೆಲುವಿನೊಂದಿಗೆ ರಿಕಿ ಪಾಟಿಂಗ್ ಎರಡನೇ ಸ್ಥಾನದಲ್ಲಿದ್ದಾರೆ. ತವರಿನಲ್ಲಿ 10 ಟೆಸ್ಟ್ ಸರಣಿ ಗೆಲುವಿನೊಂದಿಗೆ ಕೊಹ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಟಿಂಗ್ ಹೆಸರಿನಲ್ಲಿದ್ದ ದಾಖಲೆಯನ್ನ ಸರಿದೂಗಿಸಿದ್ದಾರೆ.

ನಾಯಕನಾಗಿ ವೆಸ್ಟ್ ಇಂಡೀಸ್ ನಾಯಕ ಕೈವ್ ಲಾಯ್ಡ್ 74 ಟೆಸ್ಟ್ ಪಂದ್ಯಗಳಲ್ಲಿ 36 ಗೆಲುವನ್ನು ದಾಖಲಿಸಿದ್ದರು. ಆದರೆ ಈಗ ವಿರಾಟ್ ಕೊಹ್ಲಿ ಕೇವಲ 60 ಪಂದ್ಯಗಳಲ್ಲಿ 36 ಟೆಸ್ಟ್ ಗೆಲುವು ದಾಖಲಿಸುವ ಮೂಲಕ ಲಾಯ್ಡ್ ಅವರ ದಾಖಲೆಯನ್ನು ಪುಡಿಗುಟ್ಟಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version