ಕ್ರೀಡೆ
ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ, ಟೀಂ ಇಂಡಿಯಾ ಆಯ್ಕೆ
ಸುದ್ದದಿನ,ಡೆಸ್ಕ್: ಮೇ8ರಂದು ನಡೆಯುವ,ಅಫ್ಘಾನಿಸ್ತಾನದ ವಿರುದ್ಧ ಆಡುವ ಟೀಂ ಇಂಡಿಯಾದ ‘ಎ’ ದರ್ಜೆಯ ತಂಡವನ್ನು ಟೆಸ್ಟ್ ಸರಣಿಗೆ ಬಿಸಿಸಿಐ ಆಯ್ಕೆ ಮಾಡಲಿದೆ.
ಈ ಸರಣಿಗೆ ತಯಾರ ನಡೆಸಲು ಟೀಂ ಇಂಡಿಯಾದ 8 ಆಟಗಾರರು ಮೊದಲೇ ಇಂಗ್ಲೆಂಡ್ ಗೆ ತೆರಳಲಿದ್ದು, ಅಫ್ಘಾನಿಸ್ತಾನದ ವಿರುದ್ಧ ಏಕೈಕ ಟೆಸ್ಟ್ ಪಂದ್ಯದ ನಂತರ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ.
ಈ ಒಂದು ಕಾರಣಕ್ಕೆ ಅಫ್ಘಾನಿಸ್ತಾನ ವಿರುದ್ಧದ ಪಂದ್ಯವನ್ನು ಟೀಂ ಇಂಡಿಯಾದ ಈ ಆಟಗಾರರು ಮಿಸ್ ಮಾಡಿಕೊಳ್ಳಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಆಡಲಿದ್ದು, ಉಳಿದಂತೆ ಟೆಸ್ಟ್ ಸ್ಪೆಷಲಿಸ್ಟ್ ಗಳಾದ ಮುರಳಿ ವಿಜಯ್, ಅಜಿಂಕ್ಯಾ ರೆಹಾನೆ, ಚೇತೇಶ್ವರ ಪೂಜಾರ, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಶಿಖರ್ ಧವನ್, ಆರ್ ಅಶ್ವಿನ್ ಮತ್ತು ಭುವನೇಶ್ವರ್ ಕುಮಾರ್ ಮೊದಲೇ ತರಬೇತಿಗೆ ಇಂಗ್ಲೆಂಡ್ ಗೆ ಪ್ರಯಾಣಿಸಲಿದ್ದಾರೆ.
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401