ದಿನದ ಸುದ್ದಿ
ವೀಡಿಯೊ | ಕೊಬ್ಬರಿ ಕಲೆ : ತೇಜಸ್ ಆಚಾರ್ಯ ಎಂಬ ಕಲೆಗಾರನ ಕೈಚಳಕ..!
ಕೊಬ್ಬರಿ ಕಲೆ ಇದೊಂದು ಅಪ್ಪಟ ಗುಡಿಕಲೆ. ಕಲೆಗಾರನೊಬ್ಬ ತನ್ನ ಕೈಚಳಕದಲ್ಲೆ ಚಿತ್ತಾರ ಮೂಡಿಸುವ ಈ ಕಲೆಗೆ ಮದುವೆ ದಿನಗಳಲ್ಲಿ ತುಂಬಾ ಬೇಡಿಕೆ ಇದೆ. ಮಲೆನಾಡಿನ ಮದುವೆಗಳಲ್ಲಿ ನಿಶ್ಚಿತಾರ್ಥ ಮತ್ತು ಮುಹೂರ್ತ ಶಾಸ್ತ್ರಕ್ಕೆಂದು ಬಳಸುವ ಈ ಕಲಾಕೃತಿಗೆ ಕಲೆಗಾರನ ತಾಳ್ಮೆ ಬಹಳ ಮುಖ್ಯ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯವರಾದ ತೇಜಸ್ ಆಚಾರ್ಯ ಇವರು ಕಾರ್ಪೆಂಟರ್ ಆಗಿ ಕಾಯಕ ಮಾಡುವ ಯುವಕ. ಕೊಬ್ಬರಿ ಕಲೆಯನ್ನು ಪ್ರವೃತ್ತಿಯಾಗಿ ಕರಗತ ಮಾಡಿಕೊಂಡಿರುವ ಇವರು ಓದಿದ್ದು ಪಿಯುಸಿ. ಯಾರ ಮಾರ್ಗದರ್ಶನ ಇಲ್ಲದೆ ಸ್ವ ಆಸಕ್ತಿಯಿಂದ ಜನರ ಬೇಡಿಕೆಗೆ ತಕ್ಕಂತೆ ಕಳೆದ ಮೂರು ವರ್ಷದಿಂದ ಕಲೆಯನ್ನು ರೂಢಿಸಿಕೊಂಡ ಇವರಿಗೆ ಈಗ ತುಂಬಾ ಬೇಡಿಕೆ.
ಮಾಡುವ ವಿಧಾನ
ಇಡಿಯಾದ ಒಣ ಕೊಬ್ಬರಿಯನ್ನು24 ಗಂಟೆಗಳ ಕಾಲ ಹುನಿ ಹಾಕಿ, ತದನಂತರ ತೆಗೆದು ಒಣಗಿದ ಸ್ವಲ್ಪ ಸಮಯವಾದ ನಂತರ, ಒರಟಾಗಿದ್ದ ಮೇಲ್ಪದರನ್ನು ಎರೆದು, ಸೀಡಿ ಮಾರ್ಕಿನಿಂದ ತರಾವರಿ ಕಲಾಕೃತಿಯನ್ನು ಬರೆದು ಕಟ್ಟರ್ನಿಂದ ಉಳಿದ ಭಾಗಗಳನ್ನು ಎರೆಯಬೇಕು..ಕೊಬ್ಬರಿ ಸ್ಪುರಿಸುವ ತೈಲದಿಂದ ಸಹಜ ಶೈನಿಂಗ್ ಕೊಬ್ಬರಿಯಲ್ಲಿ ಇರುತ್ತದೆ.
ಬೇಕಿರುವ ಉಪಕರಣಗಳು
ಶಾರ್ಪ ನೈಲ್ಸ್, ಬ್ಲೇಡ್, ಕಟರ್, ಚಮ್ಕಿಫ್ಯಾಬ್ರಿಕ್ ಗಮ್,ಬೀಟ್ಸ್ ಹೀಗೆ ವಿವಿಧ ವಸ್ತುಗಳೊಂದಿಗೆ ಕೊಬ್ಬರಿ ಕಲೆ ಉಳಿಯುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243