ರಾಜಕೀಯ

ಭಾರತ ತೊರೆಯದಿದ್ದರೆ ಶೂಟ್ ಮಾಡತ್ತೇವೆ: ಬಿಜೆಪಿ ಶಾಸಕನ ಹೇಳಿಕೆ

Published

on

ಸುದ್ದಿದಿನ ಡೆಸ್ಕ್: ಬಿಜೆಪಿಯ ತೆಲಂಗಾಣ ರಾಜ್ಯದ ಶಾಸಕ ಟಿ. ರಾಜಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ವಲಸಿಗರು ಗೌರವಯುತವಾಗಿ ಭಾರತ ತೊರೆದು ಹೋಗಬೇಕು. ಇಲ್ಲದಿದ್ದರೆ ಶೂಟ್ ಮಾಡಿ ಸಾಯಿಸಲಾಗುವುದು. ಆ ನಂತರ ಶೂಟ್ ಮಾಡಿ ಹೊರ ಸಾಗ ಹಾಕಲಾಗುವುದು. ಆಗ ಮಾತ್ರ ನಮ್ಮ ದೇಶ ಸುಭದ್ರವಾಗಿರಲಿದೆ ಎಂದು ಹೇಳಿಕೆ ನೀಡಿದ್ದಾರೆ.

ಹೈದರಾಬಾದ್ ಶಾಸಕ ರಾಜ ಸಿಂಗ್ ಇಂತಹ ವಿವಾದಾತ್ಮಕ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ಅನೇಕ ಬಾರಿ ನೀಡಿ ಟೀಕೆ ಗುರಿಯಾಗಿದ್ದಾರೆ. ಈ ಹಿಂದೆ ರಾಮ ಮಂದಿರ ನಿರ್ಮಾಣ, ಹೈದರಾಬಾದ್ ಮಿನಿ ಪಾಕಿಸ್ತಾನವಿದ್ದಂತೆ, ಕಾಶ್ಮೀರಿಗಳೆಲ್ಲರೂ ದ್ರೋಹಿಗಳು, ಪದ್ಮಾವತ್ ಚಿತ್ರ ಪ್ರದರ್ಶನ ಮಾಡುತ್ತಿರುವ ಚಿತ್ರಮಂದಿರಗಳನ್ನು ಸುಟ್ಟು ಹಾಕಿ ಎಂದು ಜನರಿಗೆ ಪ್ರಚೋದಿಸಿದ್ದರು. ಇಫ್ತಾರ್ ಕೂಟದಲ್ಲಿ ಭಾಗವಹಿಸುವ ರಾಜಕಾರಣಿಗಳನ್ನು ಗಡಿಪಾರು ಮಾಡಿ, ಬೆಂಗಾಳಿ ಹಿಂದೂಗಳು ದಂಗೆ ಎಳಬೇಕು ಸೇರಿದಂತೆ ಅನೇಕ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಹಳೆಯ ಹೈದರಾಬಾದ್ ಸಿಟಿ ಮಿನಿ ಪಾಕ್ ಅಂತೆ?

ಹಳೆಯ ಹೈದರಾಬಾದ್ ಸಿಟಿಯನ್ನು ಮಿನಿ ಪಾಕುಸ್ತಾನ. ಮುಖ್ಯಮಂತ್ರಿಗಳು ಶೋಧ ಕಾರ್ಯ ನಡೆಸಲು ಆದೇಶಿಸಬೇಕು. ಅಲ್ಲಿನ ಬಹುತೇಕ ಮನೆಗಳಲ್ಲಿ ಬಾಂಬ್ ಮತ್ತು ಸ್ಫೋಟಕ ವಸ್ತುಗಳು ಪತ್ತೆ ಆಗಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.

 

Leave a Reply

Your email address will not be published. Required fields are marked *

Trending

Exit mobile version