ದಿನದ ಸುದ್ದಿ
ತಾಪಮಾನ ವರದಿ
ಸುದ್ದಿದಿನ ಡೆಸ್ಕ್ : ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲ ಕಡೆ, ದಕ್ಷಿಣ ಒಳನಾಡಿನ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಧಾರವಾಡ, ಬಾಳೆ ಹೊನ್ನೂರಿನಲ್ಲಿ 3 ಕಾರ್ಕಳ, ಕುಂದಾಪುರ, ಬೆಳಗಾವಿ, ರಾಮದುರ್ಗ, ಕಲಘಟಗಿ, ಕುಂದಗೋಳ, ಜಳಕಿ, ಭದ್ರಾವತಿ, ಕಳಸದಲ್ಲಿ 2 ಸೆಂಟಿ ಮೀಟರ್ ಮಳೆಯಾಗಿದೆ.
ಕಲಬುರಗಿಯಲ್ಲಿ 39.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಮುನ್ಸೂಚನೆಯಂತೆ, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲ ಕಡೆ, ಉತ್ತರ ಒಳನಾಡಿನ ಅಲ್ಲಲ್ಲಿ ಚುರಿದಂತೆ ಮಳೆ ಸಂಭವ. ಬೆಂಗಳೂರು ಹಾಗೂ ಸುತ್ತ ಮುತ್ತ ಭಾಗಶಃ ಮೋಡ ಕವಿದ ವಾತಾವರಣ. ಬೆಳಗಿನ ವೇಳೆ ಕೆಲ ಪ್ರದೇಶಗಳಲ್ಲಿ ಮಂಜು ಮುಸುಕಿದ ವಾತಾವರಣವಿರಲಿದ್ದು, ಗರಿಷ್ಠ 35, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು ಸಂಭವ.
ನೀತಿ ಆಯೋಗದ ಇಂಧನ ಮತ್ತು ಹವಾಮಾನ ಸೂಚ್ಯಂಕದಲ್ಲಿ ಗುಜರಾತ್, ಕೇರಳ ಮತ್ತು ಪಂಜಾಬ್ ಮೊದಲ ಮೂರು ಸ್ಥಾನಗಳಲ್ಲಿವೆ. ಸಣ್ಣ ರಾಜ್ಯಗಳಲ್ಲಿ ಗೋವಾ, ತ್ರಿಪುರಾ ಮತ್ತು ಮಣಿಪುರ ಮೊದಲ ಮೂರು ಸ್ಥಾನಗಳಲ್ಲಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243