ದಿನದ ಸುದ್ದಿ
ಮಾದೇಶ, ಅಂಬಿಕಾ ಸೂಚನೆ ಮೇರೆಗೆ ನಾನೇ ಪ್ರಸಾದಕ್ಕೆ ವಿಷ ಹಾಕಿದೆ : ತಪ್ಪೊಪ್ಪಿಕೊಂಡ ಆರೋಪಿ ದೊಡ್ಡಯ್ಯ
ಸುದ್ದಿದಿನ ಡೆಸ್ಕ್ : ಹೌದು ಸುಳ್ವಾಡಿ ಮಾರಮ್ಮನ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ ವಿಧದಲ್ಲೂ ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಈವರೆಗೂ 11 ಆರೋಪಿಗಳ ಇಂಚಿಂಚು ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ಕಳೆದ ಮೂರು ದಿನಗಳಿಂದಲೂ ಆಸ್ಪತ್ರೆಯಲ್ಲಿ ತಾನೂ ಕೂಡ ಪ್ರಸಾದ ಸೇವಿಸಿದ್ದಾಗಿರುವುದಾಗಿ ದಾಖಲಾಗಿದ್ದ. ಮೂಲತಃ ತಮಿಳುನಾಡಿನ ಬರಗೂರು ಮೂಲದವನಾದ ಈತ ನಾಲ್ಕೈದು ವರ್ಷಗಳಿಂದ ಈಚೆಗೆ ಕಿಚ್ಚುಗುತ್ತು ಮಾರಮ್ಮನ ದೇಗುಲದ ಎಡಪಾಶ್ವ ದಲ್ಲಿರುವ ನಾಗದೇವತೆಯ ಅರ್ಚಕನಾಗಿದ್ದ. ನಾಲ್ಕೈದು ತಿಂಗಳ ಹಿಂದೆ ಗಾಂಜಾ ಪ್ರಕರಣದಲ್ಲೂ ಈತನನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಅಲ್ಲದೇ ಈತನ ಮೇಲೆ ಪೊಲೀಸರಿಗೆ ಅನುಮಾನ ಮೂಡಿತ್ತು. ಸಮಯಕ್ಕಾಗಿ ಕಾದು, ವೈದ್ಯರ ಸಹಕಾರದಿಂದ ಆರೋಪಿ ನಿಜ ಬಣ್ಣ ಬಯಲಾದ ಕೂಡಲೇ ದೊಡ್ಡಯ್ಯನನ್ನು ವಶಕ್ಕೆ ಪಡೆದರು.
ಆಸ್ಪತ್ರೆಯಲ್ಲಿ ದಾಖಲಾಗಿದ್ದ ದೊಡ್ಡಯ್ಯ ರೋಗಿಯಂತೆ ನಟಿಸುತ್ತಿದ್ದ. ವೈದ್ಯರು, ಪೊಲೀಸರು, ರಾಜಕಾರಣಿಗಳು ವಾರ್ಡ್ ಗೆ ಬಂದಾಗ ಸಂಕಟದಿಂದ ನರಳುತ್ತಿದ್ದ. ಬೇರೆ ವೇಳೆಯಲ್ಲಿ ಆರಾಮವಾಗಿ ಇರುತ್ತಿದ್ದ. ಈತನ ಅಕ್ಕಪಕ್ಕದ ಬೆಡ್ ನಲ್ಲಿದ್ದವರು ಸಹ ಈ ಬಗ್ಗೆ ಪೊಲೀಸರ ಬಳಿ ತಿಳಿಸಿದ್ದರು.
ತನಿಖೆಯ ಪ್ರಾರಂಭದ ವೇಳೆ ದೊಡ್ಡಯ್ಯನ ಮೇಲೆ ಯಾರಿಗೂ ಈತನ ಮೇಲೆ ಅನುಮಾನ ಮೂಢಿರಲಿಲ್ಲ. ಆದರೆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೆ ದಿನ ಕಳೆದಂತೆ ಈತನ ವರ್ತನೆ ಅನುಮಾನ ಮೂಡಿಸಿತು. ಕೂಡಲೇ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಕೆ.ಆರ್.ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ ಅನುಮಾನ ವ್ಯಕ್ತಪಡಿಸಿದರು. ಕೂಡಲೇ ಸ್ಪಂಧಿಸಿದ ವೈದ್ಯರು ಪ್ರಯೋಗಾಲಯಕ್ಕೆ ಕಳುಹಿಸಿದ್ದ ರಕ್ತದ ಮಾದರಿ ವರದಿ ಪರಿಶೀಲಿಸಿದರು. ರಕ್ತದ ಮಾದರಿ ಪರೀಕ್ಷೆ ವರದಿಯಲ್ಲಿ ದೊಡ್ಡಯ್ಯನ ಆರೋಗ್ಯ ಸರಿಯಾಗಿಯೇ ಇತ್ತು. ಆತನಿಗೆ ಯಾವುದೇ ಸಮಸ್ಯೆ ಇರಲಿಲ್ಲ. ದೇಹದಲ್ಲಿ ವಿಷದ ಅಂಶ ಸೇರಿದ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದರು.
ಈ ಎಲ್ಲಾ ಅಂಶಗಳ ಆಧಾರದ ಮೇಲೆ ಸೋಮವಾರ ಮಧ್ಯಾಹ್ನವೇ ಆರೋಪಿ ದೊಡ್ಡಯ್ಯನನ್ನು ಪೊಲೀಸರು ವಶಕ್ಕೆ ಪಡೆದರು. ಅದು ಮಫ್ತಿಯಲ್ಲಿ ಆಗಮಿಸಿ ಅತನನ್ನು ಕರೆದುಕೊಂಡು ಹೋಗಿದ್ದರು. ಈ ಸಂಗತಿ ಆಸ್ಪತ್ರೆಯ ಆ ವೈದ್ಯರು ಮತ್ತು ತನಿಖಾಧಿಕಾರಿ ಹೊರತು ಪಡಿಸಿ ಅನ್ಯರಿಗೆ ತಿಳಿದಿರಲಿಲ್ಲ.
ಮೊದಲು ಮಫ್ತಿಯಲ್ಲಿ ದೊಡ್ಡಯ್ಯನನ್ನು ವಶಪಡಿಸಿಕೊಂಡ ನಂತರ ಅವನು ಬಾಯ್ಬಿಟ್ಟ ಸತ್ಯದ ವಿಚಾರವಾಗಿಯೇ ಇಮ್ಮಡಿ ಮಹಾದೇವಸ್ವಾಮಿ, ಮಾದೇಶ್, ಅಂಬಿಕಾ ಮಾದೇಶ್ ರನ್ನು ವಿಷಾರಣೆಗೆ ಒಳಪಡಿಸಿದ್ದು ಎನ್ನಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401