ಬಹಿರಂಗ

ಎಲ್ಲಿ 56 ಇಂಚಿನ ಎದೆಯ ರಾಜತಂತ್ರ..?

Published

on

ಬಾಂಬ್ ಸ್ಫೋಟದ ಸ್ಥಳ

ಪಾಕಿಸ್ಥಾನ ಮತ್ತು ಇತರೆ ಉಗ್ರಗಾಮಿ ಪೋಷಿತ ದೇಶಗಳ ಟೆರರ್ ಕ್ಯಾಂಪ್ ಗಳಲಿ ಉರಿ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಅವರ ಈ ಪ್ರಶ್ನೆಗಳು ಪ್ರತಿಯೊಬ್ಬ ಭಾರತೀಯನವೂ ಹೌದು.

  1. ಯಾರು ನಿಮಗೆ ದೇಶದ ಆಂತರಿಕ ಭದ್ರತೆಯ ಇಂಚಿಂಚೂ ಡಿಟೈಲ್ ಗಳನ್ನ ದೃಶ್ಯಮಾಧ್ಯಮಗಳಿಗೆ ನೀಡಿ ರಾಜಕಾರಣ ಮಾಡಲು ಅನುಮತಿ ಇತ್ತದ್ದು?
  2. ಯಾರು ನಿಮಗೆ ಅನುಮತಿ ಇತ್ತದ್ದು ಉರಿ ಸಿನಿಮಾ ವನ್ನ ಬಿ ಜೆ ಪಿ ಸಿನಿಮಾ ಮಾಡಿಕೊಳ್ಳೋಕೆ ? ( ಅದರೊಳಗಿನ ಡಿಟೈಲ್ ಗಳು ಕೆಲವೆಡೆ ತುಂಬ ಫೇಕುಗಳಿವೆ ಅದು ಬೇರೆ ವಿಷಯ.ಅದೊಂದುದೇಶ ಪ್ರೇಮದ,ಸಿನಿಮಾ ಒಪ್ಪಿಕೊಂಡು ಅಭಿಮಾನಿಸುತ್ತೇನೆ.ಸರ್ಜಿಕಲ್ ಸ್ಟ್ರೈಕಿರಲಿ ಬೇರೆ ಆಪರೇಷನ್ ಗಳು ಆಂತರಿಕ ವಿಷಯಗಳು ಅವನ್ನ ಜಗಜ್ಜಾಹೀರಾಗಿಸಿ ಹಿಂದೆಂದೂ ಮಾಡದ್ದನ್ನ ನಾವು ಮಾಡಿದೆವು ಅಂತ ಸುಳ್ಳು ಜಂಭಕ್ಕೆ ಅನುಮತಿ ಕೊಟ್ಟವರ್ಯಾರು.ಬರಾಮುಲ್ಲಾ ಮುಂತಾದ ಬೇಸ್ ಕ್ಯಾಂಪ್ ಗಳ ರಹಸ್ಯ ಕಾರ್ಯಾಚರಣೆಗಳಿಗೆಅನುಮತಿ ಇಟ್ಟವರ್ಯಾರು .ಒಂದೇ ದಿನ ಆರು ಕಡೆ ಆಪರೇಷನ್ ಆಯಿತೆಂಬುದು ಪ್ರಧಾನಿ ರಕ್ಷಣಾ ಖಾತೆ ಮಿಲಟರಿ ಆಪರೇಷನ್ ಚೀಫ್ ಗೆ ಮಾತ್ರ ಗೊತ್ತಿರಬೇಕಾದ ಸಂಗತಿ ಇದನ್ನೆಲ್ಲ ಶೂಟ್ ಮಾಡಲು ಅನುಮತಿ ಕೊಟ್ಟವರ್ಯಾರು? )
  3. ಆವಂತಿಪರ ಪುಹ್ವಾಮಾ ಹೈವೇಯ ಮೂವತ್ತೈದು ಸಿಸಿಟಿವಿ ಕ್ಯಾಮರಾ ವಿಫಲವಾಗಲು ಕಾರಣವೇನು?
  4. ಹೈ ಅಲರ್ಟ್ ಡೇಂಜರ್ ಅನ್ನೋ ಸ್ಪಷ್ಟ ಇಂಟಲೆಜಿನ್ಸ್ ಸಂದೇಶ ಧಿಕ್ಕರಿಸಿದವರ್ಯಾರು ?
  5. 35 ಕಿ ಮಿ ಹೆದ್ದಾರಿ ಬಂದ್ ಆಗಬಾರದೆಂಬ ನಿಯಮ ಸಡಿಲಿಸಿದವರ್ಯಾರು?
  6. ಭಾರತ ಆಡಳಿತವಿರೋ ಕಾಶ್ಮೀರದಲ್ಲೇ ಹೀಗಾಗಿದೆಯಲ್ಲಾ ಇನ್ನು ಉಳಿದೆಡೆ ಅದೆಷ್ಟು ಉಗ್ರರು ಬಾಂಬರ್ ಗಳು ತಯಾರಾಗಿ ನಿಂತಿದ್ದಾರೆ. ಎಲ್ಲಿ 56 ಇಂಚಿನ ಎದೆಯ ರಾಜತಂತ್ರ?
  7. ಮಂಡ್ಯದ ವೀರಯೋಧ ಗುರು ಕುಟುಂಬದೆದುರು ನಿಂತು ಏನು ಸಮಾಧಾನ ಹೇಳ್ತೀರಿ.ಬರೀ ಭಾವುಕ ಭ್ರಾಮಕ ಮಾತಾಡ್ತೀರ?
  8. ಈ ದೇಶದ ಪ್ರಧಾನಿಗಳಾದ ಮೋದಿಯವರನ್ನಲ್ಲದೇ ಇನ್ಯಾರನ್ನುಪ್ರಶ್ನಿಸುವುದು ? ಅವರೇ ಮನೆಯೊಡಯನಲ್ಲವೇ? ಮೋದಿಯನ್ನು ಪ್ರಶ್ನಿಸಿದರೆ ನೀಚ ಭಾಷೆಯಲಿ ಮಾತಾಡುವ ಭಕ್ತರಿಗೆ ದೇಶ ಮುಖ್ಯವೋ ಮೋದಿಯೋ?
  9. ರಾಷ್ಟ್ರಾಭಿಮಾನವನ್ನ ರಾಜಕಾರಣದ ಗಿಮಿಕ್ ಮಾಡಿಕೊಂಡ ಪರಿಣಾಮ … ಸೈನ್ಯವನ್ನ ತನ್ನ ಪಕ್ಷದ ಸ್ವತ್ತೆಂಬಂತೆ ಪ್ರಚಾರ ಪಡೆದುಕೊಂಡ ಪರಿಣಾಮ ..ಹಿಂದೆ ವಾಜಪೇಯಿ ಯಂತಹ ಹಿರಿಯ ಜೀವ ಜೈ ಷೇ ಮಹಮದ್ ಮುಖಂಡರನ್ನ ಬಿಡುಗಡೆ ಮಾಡಿದ್ದಕ್ಕೆ ರಾಜತಾಂತ್ರಿಕ ಕಾರಣಗಳಿರಲಿಲ್ಲವೇ?…

ಇದು ಇನ್ನು ಆರಂಭ, ಮತ್ತೆ ಸರ್ಜಿಕಲ್ ಸ್ಟ್ರೈಕ್ ಅಂತ ಹೊರಡಿ ನಂತರ ಮಾತನಾಡುವುದಿದೆ. ಬಾರ್ಡರ್ ಗದಾರ್ ಭಗತ್ ಸಿಂಗ್ ನಂತಹ ಸಿನಿಮಾಗಳನ್ನ ಪಾಕಿಸ್ಥಾನದ ಜನ ಕುಣಿದು ನೋಡಿದ್ದರು .ತೆಲುಗಿನ ಮೆಹಬೂಬಾ ಕೂಡ ಅಲ್ಲಿ ಬಿಡುಗಡೆಯಾಗಿತ್ತು ಆ ಸಿನಿಮಾಗಳನ್ನ ನೋಡಿ ಯಾರಿಗೂ ಗನ್ ಎತ್ತಲು ಮನಸಾಗಿರಲಿಲ್ಲ.ಹೂವೆತ್ತಿದ್ದರು ವಾಘಾ ಗಡಿಯಲಿ..

ಹಿರಿಯ ಮಿಲಟರಿ ಅಧಿಕಾರಿಗಳೇ ಹೇಳ್ತಾ ಇದಾರೆ ಇದು ಉಗ್ರಗಾಮಿಗಳ ವಿರುದ್ಧ ರಣತಂತ್ರ ಹೆಣೆಯದ ವೈಫಲ್ಯ ನಾವು ಪ್ರತಿ ಧಾಳಿಗೆ ಯೋಜನೆಗಳನ್ನೇ ರೂಪಿಸದ ವೈಫಲ್ಯ. ಹಾಗಾದರೆ ಕಸಬ್ ನಂತವರು ನುಗ್ಗಿ ಕೊಲ್ಲುವಾಗ ಸೈನಿಕರನ್ನೇ ಹೊಡೆದುರುಳಿಸುವಾಗ, ಹೀಗೆ ತಲೆ ತಗ್ಗಿಸಿ ನಿಂತು ಬಿಡುವುದೇ ಅಥವಾ ಶ್ರದ್ಧಾಂಜಲಿ ಬರೆಯುವುದೇ ಅಥವಾ ಆಳುವ ಸರಕಾರಗಳನ್ನ ಬೈಬೇಡಿ ಎಂದು ಗೋಮುಖ ವ್ಯಾಘ್ರತೆಯ ಪಾಲು ಪಡೆಯುವುದಾ?

– ಚಕ್ರವರ್ತಿ ಚಂದ್ರ ಚೂಡ್
ಪತ್ರಕರ್ತ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version