ದಿನದ ಸುದ್ದಿ

30 ಸಿ ಆರ್ ಪಿ ಎಫ್ ಯೋಧರ ಬಲಿ‌ಪಡೆದ ಉಗ್ರ

Published

on

ಸುದ್ದಿದಿನ, ಶ್ರೀನಗರ : ಉರಿ ದಾಳಿಯ ನಂತರ ಅತ್ಯಂತ ದೊಡ್ಡ ಮಟ್ಟದ ದಾಳಿ ಕಣಿವೆ ರಾಜ್ಯದಲ್ಲಿ ನಡೆದಿದೆ. ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಉಗ್ರರು ಸಿ ಆರ್ ಪಿ ಎಫ್ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಸಿ 30 ಯೋಧರನ್ನು ಬಲಿಪಡೆದಿದ್ದಾರೆ.

ಅತ್ಯಂತ ಯೋಜಿತವಾಗಿ ಈ ದುಷ್ಕ್ರತ್ಯವೆಸಗಿ 30 ಯೋಧರನ್ನು ಬಲಿ ಪಡೆದ ಉಗ್ರನನ್ನು ಆದಿಲ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದ್ದು, ಜೈಶ್-ಎ-ಮೊಹಮ್ಮದ್ ಎಂಬ ಉಗ್ರಗಾಮಿ ಸಂಘಟನೆಯನ್ನು ಈತ ಕಳೆದ ವರ್ಷ ಸೇರಿಕೊಂಡಿದ್ದು, ಈ‌ ಸಂಘಟನೆಯಲ್ಲಿ ‘ ಗಾಡಿ ಟಕರಾನೆವಾಲಾ’ ಎಂದೇ ವಿಖ್ಯಾತಿ ಗಳಿಸಿದ್ದ.

ಈ ಆದಿಲ್ ಮೊಹಮ್ಮದ್ ಇಂದು ಸುಮಾರು 350 ಕೆಜಿ ತೂಕದ ಸ್ಪೋಟ ವಸ್ತುಗಳನ್ನು ಹೊತ್ತು ಅವಂತಿಪುರ್ ಪುಲ್ವಾಮಾ ಮಾರ್ಗಾ ಮದ್ಯೆ ಜಮ್ಮು- ಶ್ರೀನಗರ ಹೈವೇಯಲ್ಲಿ ಸಿ ಆರ್ ಪಿ ಎಫ್ ವಾಹನಕ್ಕೆ ಡಿಕ್ಕಿ ಹೊಡೆಸಿ 30 ಯೋಧರನ್ನು ಬಲಿ ಪಡೆದಿದ್ದಾನೆ.

ಯೋಧರ ಸಾವಿನ ಸಂಖ್ಯೆ ಕ್ಷಣ ಕ್ಷಣ ಕ್ಕೂ ಏರುತ್ತಿದೆ. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ 13 ಯೋಧರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆಂದು ಮೂಲಗಳು ತಿಳಿಸಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version