ದಿನದ ಸುದ್ದಿ
ಕಲಬುರಗಿಯ ‘ಬುದ್ಧ ವಿಹಾರ’ದ ಮೇಲೆ ಉಗ್ರರ ಟಾರ್ಗೆಟ್..?
ಸುದ್ದಿದಿನ ಡೆಸ್ಕ್ : ಬಾಂಗ್ಲಾದೇಶದ ಉಗ್ರಗಾಮಿ ಸಂಘಟನೆಯಿಂದ ಕಲಬುರಗಿಯ ಬುದ್ಧವಿಹಾರ ಟಾರ್ಗೆಟ್ ಹಿನ್ನಲೆ ಕಲಬುರಗಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಮಾತನಾಡಿ,ಬುದ್ಧ ವಿಹಾರ ಟಾರ್ಗೆಟ್ ಮಾಡಿರುವ ಬಗ್ಗೆ ನನಗೆನು ಗೋತ್ತಿಲ್ಲ.ಇದು ನಿಜವೋ ಗಾಳಿ ಸುದ್ದೀನೋ ಗೋತ್ತಿಲ್ಲ, ಈ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದರು.
ನಂತರ ಮಾತನಾಡಿದ ಅವರು, ಬುದ್ದ ವಿಹಾರವಿರಲಿ, ದರ್ಗಾವಿರಲಿ, ಶರಣಬಸವೇಶ್ವರ ದೇವಸ್ಥಾನವಿರಲಿ ಎಲ್ಲದಕ್ಕೂ ಭದ್ರತೆ ಒದಗಿಸುತ್ತೇವೆ. ದಲೈ ಲಾಮಾ ಹತ್ಯೆ ಸಂಚು ವಿಚಾರದಲ್ಲಿ ಜೆಎಂಬಿ ಉಗ್ರ ಸಂಘಟನೆ ಕಾರ್ಯಕರ್ತನನ್ನ ಬಂಧಿಸಿದ್ದ ಎನ್‌ಐಎ. ಈ ವೇಳೆ ರಾಜ್ಯದ ವಿವಿಧ ಸ್ಥಳಗಳನ್ನ ಟಾರ್ಗೆಟ್ ಮಾಡಿರುವುದಾಗಿ ಉಗ್ರಗಾಮಿ ಬಾಯ್ಬಿಟ್ಟಿದ್ದ.ಕಲಬುರಗಿ ಹೊರವಲಯದ ಸೇಡಂ ರಸ್ತೆಯಲ್ಲಿರುವ ದಕ್ಷಿಣ ಭಾರತದ ಅತಿದೊಡ್ಡ ಬುದ್ಧವಿಹಾರವಾಗಿದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401