ದಿನದ ಸುದ್ದಿ
ಕಾಶ್ಮೀರ ಎಸ್ಪಿ ಸಹೋದರನನ್ನು ಒತ್ತೆ ಇರಿಸಿಕೊಂಡ ಉಗ್ರರು
ಸುದ್ದಿದಿನ ಡೆಸ್ಕ್: ಉಗ್ರ ಸಯ್ಯದ್ ಸಲಾಉದ್ದಿನ್ ನನ್ನು ಎನ್ ಐಎ ಪೊಲೀಸರು ಬಂಧಿಸಿದ ಬೆನ್ನಿಗೇ ಕಾಶ್ಮೀರದ ಪೊಲೀಸ್ ವರಿಷ್ಠಾಧಿಕಾರಿಯ ಸಹೋದರ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳ ಸಂಬಂಧಿಗಳನ್ನು ಉಗ್ರರು ಒತ್ತೆ ಇರಿಸಿಕೊಂಡಿದ್ದಾರೆ.
ದಕ್ಷಿಣ ಕಾಶ್ಮೀರದಾದ್ಯಂತ ಕಾರ್ಯಾಚರಣೆ ನಡೆಸಿರುವ ಉಗ್ರರು ಸಲಾಉದ್ದಿನ್ ಬಿಡುಗಡೆಗೆ ಒತ್ತಾಯಿಸಿ ಈ ಕೃತ್ಯ ಎಸಗಿದ್ದಾರೆ.
ಪೊಲೀಸರು ಹಾಗೂ ಸರಕಾರ ಈ ವಿಷಯವನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ.ಆದರೂ ಅಲ್ಲಿನ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಜಮ್ಮು ಕಾಶ್ಮೀರದಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಅಧಿಕಾರಿಗಳನ್ನು ಉಗ್ರರು ಟಾರ್ಗೆಟ್ ಮಾಡಿ ಸೋಫಿಯಾನ್, ಕುಲ್ಗಾಂ, ಅನಂತನಾಗ್, ಆವಂತಿಪೋರ ಸೇರಿದಂತೆ ಇತರೆಡೆ ವಾಸವಿದ್ದ ಪೊಲೀಸ್ ಅಧಿಕಾರಿಗಳ ಬಂಧುಗಳನ್ನು ಅಪಹರಿಸಲಾಗಿದೆ.
ಇದರ ಬೆಳವಣಿಗೆ ಹಿಂದೆಯೇ ದಕ್ಷಿಣ ಕಾಶ್ಮೀರದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
ಈ ಸಂಬಂಧ ಗುರುವಾರ ರಾತ್ರಿ ಉನ್ನತ ಅಧಿಕಾರಿಗಳ ಮಟ್ಟದ ಸಭೆ ನಡೆದಿದ್ದು, ಶುಕ್ರವಾರ ದೊಡ್ಡ ಮಟ್ಟದ ಉಗ್ರ ನಿರ್ನಾಮ ಕಾರ್ಯಾಚರಣೆ ನಡೆಯಲಿದೆ.