/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ದಕ್ಷಿಣ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ : ಪೊಲೀಸ್ ಕುಟುಂಬದವರ ಅಪಹರಣ

Published

on

ಸುದ್ದಿದಿನ ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರಿದಿದ್ದಾರೆ. ಭಯೋತ್ಪಾದಕರನ್ನು ಬಂಧಿಸಿದ ಪೊಲೀಸರ ಮೇಲೆ ಪ್ರತಿಕಾರ ತೀರಿಸಲು ಅಪಹರಣ ನಡೆಸಿದ್ದು, ಆತಂಕ ಹುಟ್ಟಿಸಿದೆ.

ಮೂವರು ಪೊಲೀಸ್ ಅಧಿಕಾರಿಗಳು ಸೇರಿ ಪೊಲೀಸ್ ಕುಟುಂಬಗಳ ಎಂಟು ಜನರನ್ನು ಅಪಹರಿಸಿದ್ದಾರೆ. ಅಪಹರಣದ ಹೊಣೆಯನ್ನು ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿದ್ದು, ತಮ್ಮ ಕುಟುಂಬವರನ್ನು ಬಿಡುಗಡೆ ಮಾಡಿದರೆ ಒತ್ತಾಂಯಾಗಳನ್ನು ಬಿಡುಗಡೆ ಮಾಡುವುದಾಗಿ ಉಗ್ರರು ಬೆದರಿಕೆಯಾಗಿದ್ದಾರೆ. ಇದಕ್ಕಾಗಿ ಮೂರು ದಿನಗಳ ಗಡುವು ನೀಡಿದ್ದಾರೆ.

ಏನಿದು ಘಟನೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ನಡೆಸಿದ ದಾಳಿ ನಂತರ ನಾಲ್ಕು ಜನ ಪೊಲೀಸರು ಮೃತಪಟ್ಟಿದ್ದರು. ಬುಧಬಾರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆ “ಕಮಾಂಡರ್’ ಎಂದು ಹೇಳಿಕೊಂಡಿರುವ ರಯಾಜ್ ನಾಯ್ಕೊ ನ ತಂದೆ ಸೇರಿದಂತೆ ಉಗ್ರರ ಕುಟುಂದವರನ್ನು ಬಂಧಿಸಿದ್ದರು.

ಇದರಿಂದ ಪ್ರತಿಕಾರ ತೀರಿಸಿಕೊಳ್ಳಲು ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಉಗ್ರರು ಪೊಲೀಸರ ಮನೆಗಳಿಗೆ ಬೆಂಕಿ ಹಾಕಿದ್ದರು. ಗುರುವಾರ ಸಂಜೆ ಅನಂತನಾಗ್, ಕುಲ್ಗಮ್, ಷೋಪಿಯನ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಪೊಲೀಸ್ ಕುಟುಂದವನ್ನು ಅಪಹರಿಸಿದ್ದಾರೆ.

ಅಪಹರಣಕ್ಕೆ ಒಳಗಾದ ಪೊಲೀಸ್ ಕುಟುಂಬದವರ ಸುರಕ್ಷಿತ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಅಧಿಕಾರಿಗಳು ಭರವಸೆ ನೀಡಿದ್ದಾರೆ. 11 ಮಂದಿ ಅಪಹರಣ ಆಗಿರುವುದು ನಿಜಕ್ಕೂ ಆತಂಕಕಾರಿ ಎಂದು ಜಮ್ಮು ಮತ್ತು ಕಾಶ್ಮೀ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version