ಸಿನಿ ಸುದ್ದಿ

‘ಡಿ ಬಾಸ್’ ತಂಗಿಯಾಗಿ ಅಮೂಲ್ಯ..!

Published

on

ಸುದ್ದಿದಿನ ಡೆಸ್ಕ್: ಮದುವೆ ಯಾದ ನಂತರ ಅತಿಥಿ ಪಾತ್ರಗಳಿಗಷ್ಟೆ ಸೀಮಿತರಾಗಿದ್ದ ನಟಿ ಅಮೂಲ್ಯ, ಈಗ ನಟ ದರ್ಶನ್ ಚಿತ್ರದಲ್ಲಿ ಮುಖ್ಯ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ.

ತಮಿಳಿನ ‘ವೇದಾಲಂ’ ಸಿನಿಮಾ ಕನ್ನಡಕ್ಕೆ ರೀಮೇಕ್ ಆಗುತ್ತಿದ್ದು, ನಟಿ ಅಮೂಲ್ಯ ಅವರು ದರ್ಶನ್ ಅವರ ತಂಗಿಯಾಗಿ ನಟಿಸುತ್ತಿದ್ದಾರೆ.

ಅಮೂಲ್ಯ ಅವರು ಮುಗುಳು ನಗೆ ಚಿತ್ರದಲ್ಲಿ ಗಣೇಶ್ ಅವರೊಂದಿಗೆ ಲೀಡ್ ರೋಲ್ನಲ್ಲಿ ನಟಿಸಿದ್ದರು. ಮೂವರು ನಾಯಕಿಯರಿದ್ದರಿಂದ ಅಮೂಲ್ಯ ಪಾತ್ರ ಹೈಲೈಟ್ ಆಗಿರಲಿಲಲ್ಲ.

ಈ ಹಿಂದೆ ದರ್ಶನ್ ಅವರ ಪ್ರೊಡಕ್ಷನ್ ನಲ್ಲಿ ಮೂಡಿಬಂದ ‘ಮದುವೆಯ ಮಮತೆಯ ಕರೆಯೋಲೆ’ ಸಿನಿಮಾದಲ್ಲಿ ಅವರು ನಾಯಕಿಯಾಗಿ ನಟಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version