ದಿನದ ಸುದ್ದಿ

ದೇವಸ್ಥಾನಗಳ‌ ಹುಂಡಿಗೆ ಕನ್ನ ಹಾಕಿದ ಕಳ್ಳರ ಬಂಧನ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ಬೆಂಗಳೂರು | ದೇವಸ್ಥಾನಗಳ ಹುಂಡಿಗೆ 1ರೂ ಕಾಯಿನ್ ಹಾಕಿ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ. ಕುಮಾರ ,ಮಂಜ ,ಕೃಷ್ಣ , ವಿಜಯ ಬಂಧಿತ ಆರೋಪಿಗಳು.

ಸ್ಟವ್ ರಿಪೇರಿ ಮಾಡುತ್ತೇನೆಂದು ಏರಿಯಾಗಳಲ್ಲಿ ಓಡಾಡಿ ಕಳ್ಳತನ ಮಾಡುತ್ತಿದ್ದ ಆರೋಪಿಗಳು.
ಏರಿಯಾ ಸುತ್ತಾಡುವಾಗ ದೇವಸ್ಥಾನ ಕಂಡರೆ ಭಕ್ತಿ ಮೂಡುತ್ತಿತ್ತು ಆರೋಪಿಗಳಿಗೆ. ಒಮ್ಮೆ ದೇವಸ್ಥಾನದ ಒಳಗೆ ಎಂಟ್ರಿ ಕೊಟ್ರೆ ಅವರ ಕಣ್ಣು ಬೀಳುತ್ತಿತ್ತು ಹುಂಡಿಯ ಮೇಲೆ. ಹುಂಡಿಯಲ್ಲಿ ಹಣ ಇದಿಯಾ ಇಲ್ಲವಾ ಅನ್ನೋದನ್ನ ಕಾಯಿನ್ ಹಾಕುವುದರ ಮೂಲಕ ಖಚಿತ ಪಡಿಸಿಕೊಳ್ಳುತ್ತಿದ್ದ ಆರೋಪಿಗಳು.

ಹಣ ಇದೆ ಅಂತಾ ಗೊತ್ತಾದ್ರೆ ಮೂರು ದಿನಗೊಳಗಾಗಿ ಹುಂಡಿ ಕಳ್ಳತನ ಮಾಡುತ್ತಿದ್ದ ಕಳ್ಳರು. ಕಳ್ಳರು ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆ. ಆರೋಪಿಗಳಿಂದ 3ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳು ವಶಕ್ಕೆ
ಆರೋಪಿಗಳ ಬಂಧನದಿಂದ ಬೇರೆ ಬೇರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ವೆಸಗಿದ್ದ 17 ಪ್ರಕರಣ ಬೆಳಕಿಗೆ‌ ಬಂದಿದೆ.ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version