ದಿನದ ಸುದ್ದಿ

ಗುಂಡಿನ ಚಕಮಕಿ ; ಮೂವರು ಭಯೋತ್ಪಾದಕರ ಹತ್ಯೆ

Published

on

ಸುದ್ದಿದಿನ ಡೆಸ್ಕ್ : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆ ರಾಜ್‌ಪೋರಾ ಪ್ರದೇಶದ ದ್ರುಬ್ಗಾಮ್ ಗ್ರಾಮದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ.

ನಿನ್ನೆ ಸಂಜೆ ಆರಂಭವಾದ ಗುಂಡಿನ ಚಕಮಕಿ, ಇಂದು ಬೆಳಗ್ಗೆ ಅಂತ್ಯಗೊಂಡಿದೆ. ನಿನ್ನೆ ಸಂಜೆ ಓರ್ವ ಮತ್ತು ಇಂದು ಬೆಳಿಗ್ಗೆ ಇನ್ನಿಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಹತ್ಯೆಗೀಡಾದ ಮೂವರೂ ಭಯೋತ್ಪಾದಕರು ಸ್ಥಳೀಯರಾಗಿದ್ದು, ನಿಷೇಧಿತ ಲಷ್ಕರ್-ಎ-ತಯ್ಬಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರೆಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

ಜುನೈದ್ ಶೀರ್ಗೋಜ್ರಿ ಎಂಬ ಉಗ್ರ, ಕಳೆದ ತಿಂಗಳು 13ರಂದು ಪುಲ್ವಾಮಾದ ಗದೂರ ಪ್ರದೇಶದಲ್ಲಿ, ನಿರಾಯುಧರಾಗಿದ್ದ ರಿಯಾಜ್ ಅಹ್ಮದ್ ಎಂಬ ಕಾನ್‌ಸ್ಟೆಬಲ್ ಒಬ್ಬರ ಹತ್ಯೆಗೈದ ಪ್ರಕರಣದಲ್ಲಿ ಭಾಗಿಯಾಗಿದ್ದನೆಂದು ವರದಿಯಾಗಿದೆ.

ಉಳಿದ ಇಬ್ಬರು ಉಗ್ರರನ್ನು ಪುಲ್ವಾಮಾ ಜಿಲ್ಲೆಯ ಫಾಜಿಲ್ ನಜೀರ್ ಭಟ್ ಮತ್ತು ಇರ್ಫಾನ್ ಅಹ್ಮದ್ ಮಲಿಕ್ ಎಂದು ಗುರುತಿಸಲಾಗಿದೆ. ಹತ್ಯೆಗೀಡಾದ ಭಯೋತ್ಪಾದಕರ ಬಳಿ ಇದ್ದ ಎರಡು ಎಕೆ 47 ರೈಫಲ್ಸ್ ಮತ್ತು ಒಂದು ಪಿಸ್ತೂಲ್ ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version