ದಿನದ ಸುದ್ದಿ

ಉಕ್ರೇನ್ ಮೇಲಿನ ದಾಳಿ ಹಿನ್ನೆಲೆ; ರಷ್ಯಾದ ತೈಲ ಆಮದನ್ನು ನಿಷೇಧಿಸಲು ಅಥವಾ ಹಂತ ಹಂತವಾಗಿ ತೆಗೆದುಹಾಕಲು ಜಿ-7 ರಾಷ್ಟ್ರಗಳಿಂದ ಪ್ರತಿಜ್ಞೆ

Published

on

ಸುದ್ದಿದಿನ ಡೆಸ್ಕ್ : ಏಳು ರಾಷ್ಟ್ರಗಳನ್ನೊಳಗೊಂಡ ಜಿ -7 ದೇಶಗಳು, ಉಕ್ರೇನ್ ವಿವಾದದ ಹಿನ್ನೆಲೆಯಲ್ಲಿ ರಷ್ಯಾದ ತೈಲ ಆಮದನ್ನು ನಿಷೇಧಿಸಲು ಅಥವಾ ಹಂತ ಹಂತವಾಗಿ ತೆಗೆದುಹಾಕಲು ಪ್ರತಿಜ್ಞೆ ಮಾಡಿವೆ.

ಜಿ-7 ರಾಷ್ಟ್ರಗಳು ಈ ವರ್ಷದ ಮೂರನೇ ಸಭೆಯನ್ನು ನಿನ್ನೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದವು. ಈ ವೇಳೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಹ ಭಾಗವಹಿಸಿದ್ದರು.

ನಂತರ ಈ ಘೋಷಣೆ ಹೊರಬಿದ್ದಿದೆ. ಉಕ್ರೇನ್ ಗೆ ಬೆಂಬಲವಾಗಿ ಮತ್ತು ಮಾಸ್ಕೋ ವಿರುದ್ಧ ಇಂಧನ ಸೇರಿದಂತೆ ಹೆಚ್ಚುವರಿ ಕ್ರಮಗಳ ಬಗ್ಗೆ ಚರ್ಚಿಸಲು ಈ ಸಭೆಯನ್ನು ಕರೆಯಲಾಗಿತ್ತು. ಜಿ7 ರಾಷ್ಟ್ರಗಳಾದ ಫ್ರಾನ್ಸ್, ಕೆನಡಾ, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕ ಜಂಟಿ ಹೇಳಿಕೆಯಲ್ಲಿ, ರಷ್ಯಾದ ಇಂಧನದಿಂದ ದೂರ ಸರಿಯಲು ಪ್ರತಿ ದೇಶವು ಯಾವ ಬದ್ಧತೆಗಳನ್ನು ಮಾಡುತ್ತದೆ ಎಂಬುದನ್ನು ನಿಖರವಾಗಿ ನಿರ್ದಿಷ್ಟಪಡಿಸಿಲ್ಲ.

ಉಕ್ರೇನ್ ಮೇಲಿನ ದಾಳಿ ಸಂಬಂಧ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೈಗೊಂಡ ಕ್ರಮಗಳಿಗಾಗಿ ಜಿ 7ನಾಯಕರು ವೈಯಕ್ತಿಕವಾಗಿ ಟೀಕೆ ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version