ರಾಜಕೀಯ
ಬಿಜೆಪಿಯವರು ಸುಳ್ಳಿನ ಸೃಷ್ಟಿ ಕರ್ತರು : ಹೆಚ್.ವಿಶ್ವನಾಥ್
ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅಗತ್ಯತೆ ತುಂಬಾ ಇದೆ. ರಾಷ್ಟ್ರೀಯ ಪಕ್ಷಗಳಲ್ಲಿ ಹೈಕಮಾಂಡ್ ಮುಖ ನೋಡಬೇಕಾಗುತ್ತದೆ.ರಾಜಕೀಯ ಗೊಂದಲಗಳು ಇದ್ದದ್ದು ನಿಜ ಈಗ ರಾಜಕೀಯ ಗೊಂದಲಗಳ ಮೋಡ ಸರಿದಿದೆ. ಬಿಜೆಪಿ ರಾಜಕೀಯ ಗೊಂದಲ ಸೃಷ್ಠಿಸಿದೆ ಸಮ್ಮಿಶ್ರ ಸರ್ಕಾರವನ್ನು ಅಪವಿತ್ರ ಮೈತ್ರಿ ಅಂತಾರೆ,ಹಿಂದೆ ಬಿಜೆಪಿಯವರು ಅಪವಿತ್ರ ಮೈತ್ರಿ ಮಾಡಿಕೊಂಡಿಲ್ಲವೇ ಎಂದು ಜೆಡಿಎಸ್ ರಾಜ್ಯದ್ಯಕ್ಷ ಹೆಚ್.ವಿಶ್ವನಾಥ ಟಾಂಗ್ ಕೊಟ್ಟರು.
ಸುಳ್ಳಿನ ಸೃಷ್ಠಿಕರ್ತರು ಬಿಜೆಪಿಯವರು.ಕೆಲವು ಮಾಧ್ಯಮದವರು ಅದನ್ನು ದೊಡ್ಡದಾಗಿಸುತ್ತಿದ್ದಾರೆ ಆದರೆ ಶಾಸಕ ಸುಧಾಕರ್, ನಾಗರಾಜ್ ಎಲ್ಲೂ ಹೋಗಿಲ್ಲ. ಬಿಜೆಪಿ ಅರ್ಜಂಟಲ್ಲಿದೆ, ಲೋಕಸಭೆ ಚುನಾವಣೆಯೊಳಗೆ ಸರ್ಕಾರ ಪತನಕ್ಕೆ ತಂತ್ರ.
ಸಿದ್ಧರಾಮಯ್ಯ ಅವರೇ ಸಮನ್ವಯ ಸಮಿತಿ ಅದ್ಯಕ್ಷರು ಸಿದ್ಧರಾಮಯ್ಯ ಅವರೇಕೆ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಹೋಗುತ್ತಾರೆ? ಅದು ಅಸಾಧ್ಯ. ಒಬ್ಬೊಬ್ಬರ ಜಾಯಮಾನ ಒಂದೊಂದು ಥರ ಇರುತ್ತದೆ.ಸಿದ್ಧರಾಮಯ್ಯ ಸಿದ್ಧರಾಮಯ್ಯ ನೇ, ವಿಶ್ವನಾಥ್ ವಿಶ್ವನಾಥೇ ಎಂದು ಮೈಸೂರಿನ ಕಾರ್ಯಕ್ರಮದಲ್ಲಿ ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401