ದಿನದ ಸುದ್ದಿ

ಮೃತ ಹೆಣ್ಣು ಮಗು ದೇಹ ಪತ್ತೆ

Published

on

ಸುದ್ದಿದಿನ,ದಾವಣಗೆರೆ : ಹರಿಹರ ನಗರದಲ್ಲಿ ಏ.21 ರಂದು ರಾತ್ರಿ 08 ಗಂಟೆಗೆ ಹರಿಹರದ ರೈಲ್ವೆ ಕ್ವಾಟ್ರ್ರಸ್ ಬಳಿ ಮೃತ ಹೆಣ್ಣು ಮಗುವಿನ ದೇಹ ಪತ್ತೆಯಾಗಿದೆ.

ಹರಿಹರದ ರೈಲ್ವೆ ಕ್ವಾಟ್ರ್ರಸ್ ನಿವಾಸಿ 32 ವರ್ಷ ವಯಸ್ಸಿನ ರೈಲ್ವೆ ಇಲಾಖೆಯಲ್ಲಿ ಡಿ ಗ್ರೂಪ್ ನೌಕರ ಬಿ.ಆರ್ ಶಶಿಕುಮಾರ್ ಬಿನ್ ಬಸವರಾಜಪ್ಪ ಬಿ.ಆರ್ ಹರಿಹರ ಇವರು ಹರಿಹರ ಪೋಲಿಸ್ ಠಾಣೆಗೆ ಹಾಜರಾಗಿ ಏ.21 ರಂದು ಸಂಜೆ 05 ಗಂಟೆಗೆ ಹರಿಹರದ ರೈಲ್ವೆ ಕ್ವಾಟ್ರಸ್ ಬಳಿ ಹಂದಿಯೊಂದು ಸಣ್ಣ ಮಗುವಿನ ದೇಹವನ್ನು ಕಚ್ಚಿಕೊಂಡು ಹೋಗುತ್ತಿದ್ದನ್ನು ಯಾರೋ ಒಬ್ಬ ಹೆಂಗಸು ಕಂಡು ಕೂಗಿಕೊಂಡಾಗ ಅಲ್ಲೇ ಇದ್ದ ರೈಲ್ವೆ ನೌಕರನಾದ ಶಶಿಕುಮಾರ್ ರವರು ನೋಡಿ ಹಂದಿಯನ್ನು ಗದರಿಸಿದಾಗ ಅದು ಮಗುವನ್ನು ಬಿಟ್ಟು ಓಡಿ ಹೋಗಿದ್ದು ನಂತರ ಗಮನಿಸಿದಾಗ ಸುಮಾರು 3-4 ವರ್ಷ ವಯಸ್ಸಿನ ಹೆಣ್ಣು ಮಗುವಿನ ದೇಹವಿದ್ದು ಮಗುವಿನ ದೇಹ ಬೇರೆ ತಲೆ ಬೇರೆಯಾಗಿದ್ದು ತಲೆಯಲ್ಲಿ ಕೂದಲಿರೆದೆ ಮುಖ ಚಹರೆ ಇರದೇ ಗುರುತು ಹಿಡಿಯಲು ಸಾಧ್ಯಬಾಗಿರುವುದಿಲ್ಲ.

ಪ್ರಾಣಿಗಳು ತಲೆಯನ್ನು ಪೂರಾ ತಿಂದಿದ್ದು ಬಟ್ಟೆಗಳು ಇರುವುದಿಲ್ಲ ಸೊಂಟದಿಂದ ಕಾಲುಗಳವರೆಗೆ ಮಾತ್ರ ಇದ್ದು ಕೈಗಳು ಮತ್ತು ದೇಹ ಇರುವುದಿಲ್ಲ ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಏ.21 ರಂದು ಬೆಳಗ್ಗೆ 05 ರಿಂದ ಸಂಜೆ 04 ರ ಮಧ್ಯದ ಅವಧಿಯಲ್ಲಿ ಹೆಣ್ಣು ಮಗುವನ್ನು ಯಾರಿಗೂ ಗೊತ್ತಾಗದೆ ಎಲ್ಲಿಯೋ ಕೊಲೆ ಮಾಡಿ ಹಾಕಿ ಸಾಕ್ಷಿ ನಾಶ ಮಾಡಿರುತ್ತಾರೆ ಎಂದು ಶಶಿಕುಮಾರ್ ದೂರು ನೀಡಿರುತ್ತಾರೆ.

ಮೃತಳ ಚಹರೆ ಇಂತಿವೆ

ಹೆಣ್ಣು ಮಗು ವಯಸ್ಸು 3-4 ವರ್ಷ ಎತ್ತರ ಸೊಂಟದಿಂದ ಪಾದದವರೆಗಿನ ದೇಹ ಮಾತ್ರ ದೊರೆತಿದ್ದು, 26 ಇಂಚು ಉದ್ದವಿರುತ್ತದೆ. ಬಣ್ಣ ಗೋಧಿ ಬಣ್ಣ ಬಟ್ಟೆಗಳು ದೊರೆತಿರುವುದಿಲ್ಲ. ಮೃತಳ ಸೊಂಟದಿಂದ ಪಾದದವರೆಗಿನ ದೇಹ ಮಾತ್ರ ದೊರೆತಿದ್ದು ಮುಖ ಚಹರೆ ಇಲ್ಲದೇ ಇರುವುದರಿಂದ ಫೋಟೋ ಲಗತ್ತಿಸಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ : ಸಿ.ಪಿ.ಐ ಹರಿಹರ ವೃತ್ತ. 9480803234, ಪಿಎಸ್.ಐ ಹರಿಹರ ನಗರ ಪೋಲಿಸ್ ಠಾಣೆ 9480803257, ಹರಿಹರ ನಗರ ಪೋಲಿಸ್ ಠಾಣೆ 08192-272016, ದಾವಣಗೆರೆ ಕಂಟ್ರೋಲ್ ರೂಂ 08192-253100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version