ದಿನದ ಸುದ್ದಿ
ಕರ್ನಾಟಕದ ಆನೆಗುಂದಿ ಸೇರಿ, ದೇಶದ 8 ಪ್ರವಾಸಿ ತಾಣಗಳನ್ನು ಕರಕುಶಲ ಕ್ಲಸ್ಟರ್‌ಗಳೊಂದಿಗೆ ಬೆಸೆಯಲು ಕೇಂದ್ರ ಚಿಂತನೆ
ಸುದ್ದಿದಿನ ಡೆಸ್ಕ್ : ಜವಳಿ ಮತ್ತು ಪ್ರವಾಸೋದ್ಯಮ ಕಾರ್ಯಕ್ರಮದ ಭಾಗವಾಗಿ ದೇಶದ ಪ್ರಮುಖ ಪ್ರವಾಸಿ ತಾಣಗಳನ್ನು (Tourist place) ಕರಕುಶಲ ಕ್ಲಸ್ಟರ್‌ಗಳೊಂದಿಗೆ ಜೋಡಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.
ಕರಕುಶಲ ಕ್ಲಸ್ಟರ್‌ಗಳನ್ನು ಜೋಡಿಸುವುದರಿಂದ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಗಲಿದೆ. ಈ ಸಂಬಂಧ ಈಗಾಗಲೇ 8 ಕರಕುಶಲ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ | ರಾಸಾಯನಿಕ ದುರಂತ ತಡೆಗೆ ಅರಿವು ಅಗತ್ಯ : ಉಪವಿಭಾಗಾಧಿಕಾರಿ ದುರ್ಗಶ್ರೀ
ಕರ್ನಾಟಕದ ಆನೆಗುಂದಿ (Anegundi), ಒಡಿಶಾದ ರಘುರಾಜ್‌ಪುರ್, ಆಂಧ್ರಪ್ರದೇಶದ ತಿರುಪತಿ, ಗುಜರಾತ್‌ನ ವಡಜ್, ಉತ್ತರ ಪ್ರದೇಶದ ನೈನಿ ಮತ್ತು ತಾಜ್‌ಗಂಜ್, ತಮಿಳುನಾಡಿನ ಮಹಾಬಲಿಪುರಂ ಹಾಗೂ ರಾಜಸ್ತಾನದ ಅಜ್ಮೀರ್‌ಅನ್ನು 8 ಕರಕುಶಲ ಪ್ರದೇಶಗಳಾಗಿ ಗುರುತಿಸಲಾಗಿದ್ದು, ಈ ಪ್ರದೇಶಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಮತ್ತಷ್ಟು ಮೂಲಸೌಕರ್ಯ ಒದಗಿಸುವ ಉದ್ದೇಶ ಹೊಂದಲಾಗಿದೆ.
ಈ ಪ್ರದೇಶಗಳಲ್ಲಿ ತಯಾರಿಸುವ ಪರಿಕರಗಳನ್ನು ದೇಶಾದ್ಯಂತ ಪ್ರಚುರಪಡಿಸುವ ಮತ್ತು ಅವುಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶವನ್ನೂ ಕೂಡ ಹೊಂದಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243