ಕ್ರೀಡೆ

ಖೇಲೊ ಇಂಡಿಯಾ ಯೂನಿವರ್ಸಿಟಿ ಕ್ರೀಡಾಕೂಟಕ್ಕೆ ವರ್ಣ ರಂಜಿತ ತೆರೆ

Published

on

ಸುದ್ದಿದಿನ ಡೆಸ್ಕ್ : ಹತ್ತು ದಿನಗಳಿಂದ ಬೆಂಗಳೂರಿನಲ್ಲಿ ನಡೆದ ಖೇಲೊ ಇಂಡಿಯಾ ಯುನಿವರ್ಸಿಟಿ ಗೇಮ್ಸ್ 2021ಕ್ಕೆ ನಿನ್ನೆ ಸಂಜೆ ವರ್ಣರಂಜಿತ ತೆರೆಬಿತ್ತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ, 2047ಕ್ಕೆ ಭಾರತ ತನ್ನ ಸ್ವಾತಂತ್ರ್ಯ ಶತಮಾನೋತ್ಸವ ಸಮಾರಂಭವನ್ನು ಆಚರಿಸಿಕೊಳ್ಳುವ ಸಂದರ್ಭದಲ್ಲಿ ನಡೆಯುವ ಯಾವುದೇ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತ ಪದಕಪಟ್ಟಿಯಲ್ಲಿ ಮೊದಲ 5 ಸ್ಥಾನಗಳಲ್ಲಿ ಪಡೆಯುವ ಮಹತ್ವಾಕಾಂಕ್ಷೆ ಹೊಂದಲಾಗಿದೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪಡೆಯಲು ಅಗತ್ಯವಿರುವ ಕಾರ್ಯದಕ್ಷತೆಯನ್ನು ಸುಧಾರಿಸಲು ಉಪಕ್ರಮಗಳನ್ನು ಕೈಗೊಂಡಿದೆ ಎಂದರು.

ಇದಕ್ಕೂ ಮುನ್ನ ಕ್ರೀಡಾಕೂಟದ ಕೊನೆಯ ದಿನ ಕಬ್ಬಡಿ ಮತ್ತು ಫುಟ್ಬಾಲ್ ಫೈನಲ್ ಪಂದ್ಯ ಜರುಗಿತು. ಸಮಗ್ರ ಚಾಂಪಿಯನ್ ಪಟ್ಟವನ್ನು ಆತಿಥೇಯ ಜೈನ್ ವಿಶ್ವವಿದ್ಯಾಲಯ ಗೆದ್ದುಕೊಂಡರೆ, ಲವ್ಲಿ ಪ್ರೋಫೆಷನಲ್ ವಿಶ್ವವಿದ್ಯಾಲಯ ಎರಡನೇ ಸ್ಥಾನ ಗಳಿಸಿಕೊಂಡಿತು. 20ಚಿನ್ನ, 7 ಬೆಳ್ಳಿ ಹಾಗೂ 5ಕಂಚಿ ಪದಕಗೊಳಿದಿಗೆ ಜೈನ್ ವಿಶ್ವವಿದ್ಯಾಲಯದ ಒಟ್ಟು 32ಪದಕಗಳನ್ನು ಗಳಿಸಿ, ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.

ಲವ್ಲಿ ಪ್ರೋಫೆಷನಲ್ ವಿಶ್ವವಿದ್ಯಾಲಯ ಉತ್ತಮ ಪ್ರದರ್ಶನ ತೋರಿ 17 ಚಿನ್ನ, 15 ಬೆಳ್ಳಿ, 19ಕಂಚಿ ಪದಕದೊಂದಿಗೆ 2ನೇ ಸ್ಥಾನಪಡೆಯಿತು. ಪಂಜಾಬ್ ವಿಶ್ವವಿದ್ಯಾಲಯ ಈ ಬಾರಿ 15 ಚಿನ್ನ, 9ಬೆಳ್ಳಿ, 24 ಕಂಚಿನ ಪದಕದೊಂದಿಗೆ ಮೂರನೇ ಸ್ಥಾನ ಗಳಿಸಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version