ದಿನದ ಸುದ್ದಿ
ಶಿಕ್ಷಕರ ತರಬೇತಿ ಮತ್ತು ಸಿಬ್ಬಂದಿ ಸಾಮರ್ಥ್ಯ ಅಭಿವೃದ್ಧಿಗಾಗಿ ’ಮಾಳವೀಯ ಮಿಷನ್’ ಪರಿಕಲ್ಪನೆ ಅತ್ಯಗತ್ಯ : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
ಸುದ್ದಿದಿನ ಡೆಸ್ಕ್ : ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿಯ ಸಾಮರ್ಥ್ಯ ನಿರ್ಮಾಣ ಕುರಿತ ಸಾಂಸ್ಥಿಕ ವ್ಯವಸ್ಥೆಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪರಾಮರ್ಶಿಸಿದರು.
ಶಿಕ್ಷಕರ ತರಬೇತಿ ಮತ್ತು ಸಿಬ್ಬಂದಿ ಸಾಮರ್ಥ್ಯ ಅಭಿವೃದ್ಧಿಗಾಗಿ ’ಮಾಳವೀಯ ಮಿಷನ್’ ಪರಿಕಲ್ಪನೆ ಅಳವಡಿಸುವುದು ಅತ್ಯಗತ್ಯ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಪ್ರತಿಪಾದಿಸಿದರು.
21ನೇ ಶತಮಾನದ ಭಾರತದ ಸವಾಲುಗಳನ್ನು ಎದುರಿಸಲು ಬಹು ಆಯಾಮದ ವ್ಯವಸ್ಥೆ ರೂಪಿಸಬೇಕಿದೆ ಎಂದ ಸಚಿವರು, ಶಿಕ್ಷಣದಲ್ಲಿ ಭಾರತೀಯ ಮೌಲ್ಯಗಳು, ದೇಶೀಯ ಭಾಷೆ, ಜ್ಞಾನ ಮತ್ತು ಪರಂಪರೆಯನ್ನು ಅಳವಡಿಸುವುದು ಹಾಗೂ ಶಿಕ್ಷಕರ ತರಬೇತಿಗೆ ಬಹುಶಿಸ್ತೀಯ ಕ್ರಮ ಅನುಸರಿಸುವುದು ಅತ್ಯಗತ್ಯ ಎಂದು ತಿಳಿಸಿದರು.
Reviewed the report on institutional mechanism for capacity building of teacher/faculty in higher education institutes. Called for a “Malviya Mission” to set up nation-wide ecosystem for faculty development. pic.twitter.com/gX362tLSwP
— Dharmendra Pradhan (@dpradhanbjp) May 17, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243