ದಿನದ ಸುದ್ದಿ

ರೈತರು ಸದೃಢರಾದರೆ ಮಾತ್ರ ದೇಶದ ಪ್ರಗತಿ ಸಾಧ್ಯ : ಪ್ರಧಾನಮಂತ್ರಿ ನರೇಂದ್ರ ಮೋದಿ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಕೃಷಿಗೆ ಸಂಬಂಧಿಸಿದ ಇತರೆ ಕಾರ್ಯಕ್ರಮಗಳ ಮೂಲಕ ದೇಶದ ಕೋಟ್ಯಂತರ ರೈತರಲ್ಲಿ ಹೊಸ ಶಕ್ತಿ ಮೂಡಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ರೈತರು ಸದೃಢರಾದರೆ ದೇಶ ತಾನಾಗೇ ಪ್ರಗತಿ ಹೊಂದುತ್ತದೆ ಎಂದು ಅವರು ಹೇಳಿದ್ದಾರೆ. ಟ್ವೀಟ್ ಸಂದೇಶದಲ್ಲಿ ಅವರು, ನಮ್ಮ ರೈತರ ಬಗ್ಗೆ ದೇಶ ಹೆಮ್ಮೆ ಪಡುತ್ತಿದೆ ಮತ್ತು ನಮ್ಮ ರೈತರು ಸಬಲರಾದಾಗ ನವಭಾರತವು ಹೆಚ್ಚು ಸಮೃದ್ಧಿಯಾಗಲಿದೆ ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ವಾರ್ಷಿಕ 6 ಸಾವಿರ ರೂಪಾಯಿ ಆರ್ಥಿಕ ನೆರವು ದೊರೆಯುತ್ತಿದೆ. ಈ ಹಣವನ್ನು ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂಪಾಯಿಗಳಂತೆ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ.

ಇದುವರೆಗು 1 ಲಕ್ಷ 82 ಸಾವಿರ ಕೋಟಿ ರೂಪಾಯಿಗಳನ್ನು 11 ಕೋಟಿ 30 ಲಕ್ಷಕ್ಕೂ ಅಧಿಕ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ.
ಇ-ನ್ಯಾಮ್ ವೇದಿಕೆಯಡಿಯಲ್ಲಿ 1 ಕೋಟಿ 73ಲಕ್ಷಕ್ಕೂ ಅಧಿಕ ರೈತರು ತಾವಾಗಿಯೇ ನೋಂದಣಿ ಮಾಡಿಕೊಂಡಿದ್ದಾರೆ.

ರಾಷ್ಟ್ರೀಯ ಕೃಷಿ ಮಾರುಕಟ್ಟೆ ಇ-ನ್ಯಾಮ್ ಒಂದು ಪ್ಯಾನ್ ಇಂಡಿಯಾ ವಿದ್ಯುನ್ಮಾನ ವ್ಯಾಪಾರ ಪೋರ್ಟಲ್ ಆಗಿದ್ದು, ದೇಶದಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಿಗಳ ಜಾಲದೊಂದಿಗೆ ಸಂಪರ್ಕ ಹೊಂದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version