ದಿನದ ಸುದ್ದಿ
ಚನ್ನಗಿರಿ : ವಿದ್ಯುತ್ ತಂತಿ ತಗುಲಿ ರೈತ ಸಾವು
ಸುದ್ದಿದಿನ,ದಾವಣಗೆರೆ : ಟ್ಯಾಂಕರ್‍ಗೆ ನೀರು ತುಂಬಿಸುವಾಗ ವಿದ್ಯುತ್ ಸ್ಪರ್ಶವಾದ ಪರಿಣಾಮ ರೈತರೊಬ್ಬರು ಸಾವನ್ನಪ್ಪಿದ್ದಾರೆ.ಚನ್ನಗಿರಿ ತಾಲ್ಲೂಕಿನ ಲಿಂಗದಹಳ್ಳಿ ಚಾನಲ್ ಬಳಿ ಘಟನೆ ಜರುಗಿದೆ.
ರಘುನಾಯ್ಕ್, (30) ಸಾವನ್ನಪ್ಪಿದ ರೈತ. ಈತ ಚನ್ನಗಿರಿ ತಾಲ್ಲೂಕಿನ ಮಲ್ಲಿಗೆರೆ ಗ್ರಾಮದ ನಿವಾಸಿ. ಲಿಂಗದಹಳ್ಳಿ ಚಾನಲ್ ಬಳಿ ನೀರು ತುಂಬುವಾಗ ಈ ಅವಘಡ ನಡೆದಿದೆ. ತೋಟಕ್ಕೆ ಟ್ಯಾಂಕರ್ ಮೂಲಕ ನೀರು ಕೊಂಡೊಯ್ಯುಲು ಟ್ಯಾಂಕರ್ ಗೆ ನೀರು ತುಂಬಿಸುತ್ತಿದ್ದ ರು ಈ ವೇಳೆ ವಿದ್ಯುತ್ ಸ್ಪರ್ಶಿಸಿದೆ ಪರಿಣಾಮ ರೈತ ರಘುನಾಯ್ಕ್ ಸಾವನ್ನಪ್ಪಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243