ದಿನದ ಸುದ್ದಿ

ಚುಂಚನಕಟ್ಟೆ ಜಲಪಾತದಲ್ಲಿ ಮುಳುಗಿ ಸಿಎಫ್ಟಿಆರ್ ಐ ಅಧಿಕಾರಿ ಸಾವು

Published

on

ಸುದ್ದಿದಿನ ಡೆಸ್ಕ್ : ಚುಂಚನಕಟ್ಟೆ ಕಾವೇರಿ ಜಲಪಾತದಲ್ಲಿ ಸೋಮಶೇಖರ್ ಎಂಬ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಸೋಮಶೇಖರ್ 40 ಎಂಬುವರು ಮೂಲತಃ ಉತ್ತರ ಪ್ರದೇಶದವರಾಗಿದ್ದು ಮೈಸೂರಿನ ‘ಸಿ ಎಫ್ ಟಿ ಆರ್’ ನಲ್ಲಿ ‘ ಐ ಸೈನ್ಸಿಟ್ ‘ ಆಗಿಕಾರ್ಯನಿರ್ವಹಿಸುತ್ತಿದ್ದರು. ರಜೆ ಇದ್ದ ಹಿನ್ನೆಲೆಯಲ್ಲಿ ಪ್ರವಾಸಕ್ಕೆಂದು ಕುಟುಂಬ ದೊಂದಿಗೆ ಚುಂಚನಕಟ್ಟೆ ಕಾವೇರಿ ಜಲಪಾತ ನೋಡಲು ಬಂದಿದ್ದರು.

ಜಲಪಾತದಲ್ಲಿ ಕುಟುಂಬ ದೊಂದಿಗೆ ಆಟವಾಡುವ ಸಮಯದಲ್ಲಿ ಇದ್ದಕ್ಕಿದ್ದಂತೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಕಾರಣ ಕೊಚ್ಚಿಹೋಗಿದ್ದು ಜಲಪಾತದಿಂದ ಕೆಳಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಅಲ್ಲಿ ಜಲಪಾತ ನೋಡುತ್ತಿದ್ದ ಇತರೆ ಪ್ರವಾಸಿಕರು ಸಹಾಯಕ್ಕೆ ಧಾವಿಸಿದರು. ನಂತರ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ಮೃತದೇಹ ಪತ್ತೆಯಾಗಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version