ದಿನದ ಸುದ್ದಿ

ಈಜಲು ಹೋದ ವಿದ್ಯಾರ್ಥಿ ನೀರು ಪಾಲು

Published

on

ಸುದ್ದಿದಿನ,ಹುಣಸೂರು : ಪಟ್ಟಣದ ನಿವಾಸಿ ಸುರೇಶ್ ರಾವ್‌ರವರ ಪುತ್ರ ನಂದನ್ ರಾವ್ ಮರದೂರ್ ಬಳಿ ಲಕ್ಷ್ಮಣ ತೀರ್ಥ ನದಿಯಲ್ಲಿ ಈಜಲು ಹೋಗಿ ಸುಳಿಯಲ್ಲಿ ಸಿಕ್ಕಿ ಮೃತಪಟ್ಟ ಘಟನೆ ಇಂದು ನಡೆದಿದೆ.

ಮರದೂರಿನಲ್ಲಿ ನಾಳೆ ನಡೆಯಲಿದ್ದ ಕ್ರೀಡಾ ಕೂಟ ನಡೆಯಲಿದ್ದು, ಕಬ್ಬಡಿ ಆಟಗಾರರಾಗಿದ್ದ
2ನೇ ಪಿಯುಸಿ ವಿದ್ಯಾರ್ಥಿ ನಂದನ್‌ರಾವ್ ಹಾಗೂ ೪ ಜನ ಸ್ನೇಹಿತರು ಇಂದು ಸ್ಥಳ ವೀಕ್ಷಣೆಗಾಗಿ ಮರದೂರಿಗೆ ತೆರಳಿದ್ದರು. ನಂತರ ಹೊಳೆ ಬದಿ ಕುಳಿತು ಊಟ ಮಾಡಲು ತೆರಳಿದ್ದ ಸಂಧರ್ಬ ನಾಲ್ವರು ಸ್ನೇಹಿತರು ಊಟಕ್ಕೆ ಕುಳಿತರೆ ನಂದನ್ ನದಿಯಲ್ಲಿ ಈಜಲು ಮುಂದಾಗಿದ್ದಾನೆ. ಆ ಜಾಗದಲ್ಲಿ ಸುಳಿ ಇದ್ದು,
ನಂದನ್ ಸುಳಿಗೆ ಸಿಕ್ಕಿಹಾಕಿಕೊಂಡಿದ್ದಾನೆ. ಸ್ನೇಹಿತರ ಕಿರುಚಾಟ ಕೇಳಿ ಪಕ್ಕದ್ದಲ್ಲೇ ಬಟ್ಟೆ ಒಗೆಯುತ್ತಿದ್ದ ಮಹಿಳೆಯರ ಸೀರೆಯ ಸಹಾಯದಿಂದ ನಂದನ್ ರವರನ್ನು ಹೊರಗೆ ತೆಗೆದು, ಅವನು ಸೇವಿಸಿದ್ದ ನೀರನ್ನು ಸಹ ಆಚೆಗೆ ತೆಗೆದಿದ್ದಾರೆ. ಆದರೆ ದುರಾದೃಷ್ಟವಶಾತ್
ನಂದನ್ g ಹೆಚ್ಚಾಗಿ ನೀರು ಸೇವಿಸಿದ್ದರಿಂದ ಅವರು ಅಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಬಿಳಿಕೆರೆ ಠಾಣೆ ಪೋಲಿಸರು ಆಗಮಿಸಿ, ಪ್ರಕರಣ ದಾಖಲಿಸಿದ್ದಾರೆ. ಶವ ಪರೀಕ್ಷೆ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಿಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version