ದಿನದ ಸುದ್ದಿ
ಮರದಿಂದ ಕೆಳಗೆ ಬಿದ್ದು ಖೈದಿ ಸಾವು
ಸುದ್ದಿದಿನ ಡೆಸ್ಕ್ : ಜೈಲು ಸೇರಿದ್ದ ಖೈದಿಯೊಬ್ಬ ಮರವೇರಿ ಕೆಳಗೆ ಬಿದ್ದ ಘಟನೆ ದಾವಣಗೆರೆಯಲ್ಲಿ ಸಂಭವಿಸಿದೆ. ನಿಂಗಪ್ಪ (26) ಎನ್ನುವ ವ್ಯಕ್ತಿ ಕೊಲೆ ಅಪರಾದದ ಮೇಲೆ ಜೈಲು ಸೇರಿದ್ದ.ಇಂದು ಬೆಳಗ್ಗೆಯಿಂದಲೆ ಜೈಲು ಆವರಣದಲ್ಲಿನ ತೆಂಗಿನ ಮರವೇರಿ ಕುಳಿತು ಜೈಲು ಸಿಬ್ಬಂದಿಗೆ ಬಿಸಿ ಮುಟ್ಟಿಸಿದ.ಸ್ಥಳದಲ್ಲಿದ ಪೊಲೀಸರು ಎಷ್ಟೇ ಮನವೊಲಿಸಲು ಪ್ರಯತ್ನ ಪಟ್ಟರು ಕೂಡ ಮರದಿಂದ ಕೆಳಗೆ ಇಳಿಯದೆ ಭಯದ ವಾತಾವರಣ ಸೃಷ್ಟಿ ಮಾಡಿದ್ದ.ಪರಿಸ್ಥಿತಿಯನ್ನು ಅರಿತ ಪೊಲೀಸರು ಕೂಡಲೆ ಅಗ್ನಿಶಾಮಕ ದಳವನ್ನು ಕರೆಸಿ, ತೆಂಗಿನಮರದ ಕೆಳಗೆ ಬಲೆಯನ್ನು ಹಾಕಿಸಿದರು. ಇದಾದ ಕೆಲವೆ ನಿಮಿಷಗಳಲ್ಲಿ ಸುಮಾರು 30 ಅಡಿಗೂ ಎತ್ರದ ಮರದಿಂದ ಕೈ ಜಾರಿ ಕೆಳಗೆ ಬಿದ್ದ. ಕೂಡಲೆ ಅಗ್ನಿಶಾಮಕ ವಾಹನ ದಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಮರದಿಂದ ಕೆಳಗೆ ಬಿದ್ದ ಖೈದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಹೂವಿನಹಡಗಲಿ ಗ್ರಾಮದ ನಿಂಗಪ್ಪ
ಹೆಂಡತಿಯ ಮೇಲೆ ಹಲ್ಲೆ ಮಾಡಿದ ಆರೋಪದಡಿ ಮೂರು ತಿಂಗಳ ಹಿಂದೆ ಜೈಲು ಸೇರಿದ್ದ. ನನಗೆ ಅನ್ಯಾಯ ಆಗಿದೆ ಎಂದು ಹೇಳಿ ಮರವೇರಿ ಕುಳಿತಿದ್ದ.