ದಿನದ ಸುದ್ದಿ

ಎಸಿಬಿಯನ್ನು ರದ್ದು ಗೊಳಿಸುವಂತೆ ಆಗ್ರಹ : ಸಿಎಂ ಕಛೇರಿ ಮುಂದೆ ಹೋರಾಟಕ್ಕೆ ಸಜ್ಜು

Published

on

ಸುದ್ದಿದಿನ, ಬೆಂಗಳೂರು : ಎಸಿಬಿ ರಚನೆ ಮಾಡಿ ಸಿದ್ದರಾಮಯ್ಯ ಮೂರ್ಖತನದ ನಿರ್ಧಾರ ತೆಗೆದುಕೊಂಡರು. ಆದರೆ ಈಗ ಅದನ್ನುಮುಂದುವರೆಸುತ್ತಿರುವುದು ಮತ್ತೊಂದು ಮೂರ್ಖತನ.ಕುಮಾರಸ್ವಾಮಿ ತಕ್ಷಣ ಎಸಿಬಿ ರದ್ದುಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ವಕೀಲರಾದ ಕೆ.ಎಂ ಧನಂಜಯ್ ಹೇಳಿದ್ದಾರೆ.

ಈ ಸಂಬಂಧ ರಮೇಶ್ ಬಾಬು ಅವರು ನಾವು ಎಸಿಬಿಯನ್ನು ವಿರೋಧಿಸುತ್ತೇವೆ. ಆದರೆ ಎಸಿಬಿ ಮುಂದುವರೆಸುವುದಾಗಿ ಸರ್ಕಾರ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ. ಸರ್ಕಾರದ ಅನಿವಾರ್ಯತೆ ಏನಿದೆಯೋ ಗೊತ್ತಿಲ್ಲ. ಎಸಿಬಿಯನ್ನು ಮುಚ್ಚುವುದಾಗಿ ನಾವು ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೆವು. ನಮ್ಮಿಂದ ಲೋಪವಾಗಿರಬಹುದು. ಆದರೆ ನಾವು ಎಸಿಬಿಯನ್ನು ಒಪ್ಪುವುದಿಲ್ಲ. ಅದು ಸ್ವತಂತ್ರ ಸಂಸ್ಥೆಯಲ್ಲ. ಒಬ್ಬಮಂತ್ರಿಯ ಕೆಳಗೆ ಕೆಲಸ ಮಾಡುವ ಸಂಸ್ಥೆ ಅದರಿಂದ ನ್ಯಾಯ ಸಿಗುವುದಿಲ್ಲ. ಈ ವಿಷಯವನ್ನು ದೇವೇಗೌಡರು ಹಾಗೂ ಕುಮಾರಸ್ವಾಮಿ ಗಮನಕ್ಕೆ ತರುತ್ತೇನೆ ಎಂದು ಕಿಡಿಕಾರಿದ್ದಾರೆ.

ಈ ವಿಷಯದ‌ ಕುರಿತಾಗಿ ಮಾಜಿ ಸ್ಪೀಕರ್ ಕೆ.ಆರ್..ಪೇಟೆ ಕೃಷ್ಣ ಅವರು ಭ್ರಷ್ಟಾಚಾರದ ವಿರುದ್ದ ಹೋರಾಟ ಸಧ್ಯಕ್ಕೆ ಫಲ ಕೊಡುವುದಿಲ್ಲ. ಭವಿಷ್ಯದಲ್ಲಿ ಜನ ದಂಗೆ ಏಳುವ ಕಾಲ ಬರುತ್ತದೆ. ಈಗ ಹಣ ಮಾಡಿಕೊಂಡಿರುವ ರಾಜಕಾರಣಿಗಳಿಗೆ ಯಾವುದೇ ತೊಂದರೆ ಆಗದಿರಬಹುದು. ಆದರೆ, ಅವರ ಮಕ್ಕಳನ್ನು ಜನ ಎಳೆದು ಹೊಡೆಯುವ ಕಾಲ ಬರುತ್ತದೆ. ಚೈನಾದಲ್ಲಿ ದಂಗೆಯಾದಾಗ ಜನರು ಹೊಡೆಯುತ್ತಾರೆ ಎಂದು ಕೆಲವರು ತಾವೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಕಾಲ ಭಾರತದಲ್ಲಿಯೂ ಬರುತ್ತದೆ. ಆರಂಭದಲ್ಲಿ ಲೋಕಪಾಲ್ ಬಗ್ಗೆ ಮೋದಿ ಹೇಳಿದ್ದ ಮಾತು ಕೇಳಿ ನಾನೂ ಅವರನ್ನ ಬೆಂಬಲಿಸಿದ್ದೆ. ಈಗ ಸತ್ಯ ಏನು ಅಂತ ಅರ್ಥ ಆಗುತ್ತಿದೆ. ಲೋಕಾಯುಕ್ತ ಬಲಗೊಳ್ಳುವವರೆಗೂ ಪ್ರತಿ ತಿಂಗಳು ಸಿಎಂ ಕಚೇರಿ ಎದುರು ಪ್ರತಿಭಟನೆ ನಡೆಸಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9986815401

Leave a Reply

Your email address will not be published. Required fields are marked *

Trending

Exit mobile version