ದಿನದ ಸುದ್ದಿ
ನಾಯಿ ಆಸೆ ತೋರಿಸಿ ಚಿರತೆ ಹಿಡಿದರು
ಸುದ್ದಿದಿನ,ಚಿಕ್ಕಬಳ್ಳಾಪುರ: ತೋಟದ ಮನೆಯಲ್ಲಿ ಕಟ್ಟಿ ಹಾಕಿದ್ದ ಸಾಕುನಾಯಿಯನ್ನು ಕೊಂದು ಹಾಕಿದ್ದ ಚಿರತೆಯನ್ನ ಅರಣ್ಯಾಧಿಕಾರಿಗಳು ಬೋನಿನಲ್ಲಿ ಬಂಧಿಸಿದ್ದಾರೆ.
ಚಿರತೆಯನ್ನು ಬೋನಿಗೆ ಬೀಳಿಸಲು ನಾಯಿಯ ಆಸೆ ತೋರಿಸಿ ಚಿಕ್ಕಬಳ್ಳಾಪುರದ ಅರಣ್ಯ ಅಧಿಕಾರಿಗಳು ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಕೋಳೂರು ಸಮೀಪದ ಅರಣ್ಯ ಇಲಾಖೆ ನಿರ್ಮಿಸಿರುವ ಪ್ಲಾಂಟೇಷನ್ ಬಳಿ ಚಿರತೆಯು ಕಂಡುಬಂದಿತ್ತು. ಮೇ 29 ರ ಭಾನುವಾರ ರಾತ್ರಿ ಹರೀಶ್ ಅವರ ತೋಟದ ಮನೆಗೆ ನುಗ್ಗಿ ಸಾಕುನಾಯಿಯನ್ನು ಕೊಂದು ಹಾಕಿತ್ತು.
ಕೋಳೂರು, ಅಂತರಹಳ್ಳಿ, ಮರಳೇನಹಳ್ಳಿ,ಶಿರವಾರ, ಶ್ರೀನಿವಾಸಪುರ, ಕಮಲೂರು, ಮೂರು ಕಿಮೀ ಅಂತರದ ಅಕ್ಕಪಕ್ಕದ ಗ್ರಾಮಗಳಲ್ಲಿ ಚಿರತೆ ಇರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು.
ಕೂಡಲಢ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಕೋಳೂರು ಪ್ಲಾಂಟೇಷನ್ ಬಳಿ ಬೋನ್ ಅಳವಡಿಸಿ, ಚಿರತೆ ಸೆರೆಗೆ ಕ್ರಮಕೈಗೊಂಡು, ಭಾನುವಾರ ಚಿರತೆ ಸೆರೆಹಿಡಿದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243