ದಿನದ ಸುದ್ದಿ

ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರಕ್ಕೆ ಅನುಮತಿ ಕಡ್ಡಾಯ

Published

on

ಸುದ್ದಿದಿನ, ಮಂಡ್ಯ | ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2018 ರ ಸಂಬಂಧ ಪತ್ರಿಕಾ, ಶ್ರವಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರ ಸಾಮಗ್ರಿಗಳ ಕಾನೂನುಬದ್ಧ ನಿಯಂತ್ರಣಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎನ್. ಮಂಜುಶ್ರೀ ತಿಳಿಸಿದ್ದಾರೆ.

ರಾಜಕೀಯ ಪಕ್ಷಗಳಾಗಲೀ ಅಥವಾ ಅಭ್ಯರ್ಥಿಗಳಾಗಲೀ ಜಿಲ್ಲೆಯಲ್ಲಿ ಪ್ರಚಾರವನ್ನು ಕೈಗೊಳ್ಳುವಾಗ ಶ್ರವಣ ಹಾಗೂ ದೃಶ್ಯ ಮಾಧ್ಯಮಗಳ ಪ್ರಚಾರ ಸಾಮಗ್ರಿಗಳ ಬಗ್ಗೆ ವಿವರಗಳನ್ನು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿಗೆ ಅಗತ್ಯ ನಮೂನೆಗಳಲ್ಲಿ ಭರ್ತಿ ಮಾಡಿ ನೀಡಿ, ಪರಿಶೀಲನಾ ಸಮಿತಿಯ ಅನುಮತಿಯನ್ನು ಪಡೆದುಕೊಳ್ಳಬೇಕು.
ಜಿಲ್ಲಾ ಸಮಿತಿಗೆ ರಾಜಕೀಯ ಪಕ್ಷಗಳಾಗಲೀ ಅಥವಾ ಅಭ್ಯರ್ಥಿಗಳಾಗಲೀ ತಾವು ಪ್ರಚುರ ಪಡಿಸಬೇಕಾದ ಜಾಹೀರಾತು ವಿವರಗಳ ಕರಡನ್ನು ಲಗತ್ತಿಸಿ ಅನುಮತಿಗಾಗಿ ಅರ್ಜಿ ಸಲ್ಲಿಸಿದಾಗ ಅವುಗಳನ್ನು ಪರಿಶೀಲಿಸಿ ಪ್ರಸಾರಕ್ಕೆ ಯೋಗ್ಯ ಹಾಗೂ ಸದಾಚಾರ ಸಂಹಿತೆ ಉಲ್ಲಂಘನೆ ಆಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಪ್ರಚಾರಕ್ಕೆ ಅನುಮತಿ ನೀಡಲಿದೆ ಎಂದರು.

ದೂರದರ್ಶನ ಚಾನಲ್ ಅಥವಾ ಕೇಬಲ್ ನೆಟ್‍ವರ್ಕ್‍ಗಳಲ್ಲಿ ಪ್ರಚಾರವನ್ನು ನೀಡಬಯಸುವ ಪ್ರತಿಯೊಂದು ನೋಂದಾಯಿತ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳು ಮತ್ತು ಪ್ರತಿಯೊಬ್ಬ ಸ್ಪರ್ಧಿಸುವ ಅಭ್ಯರ್ಥಿಯು ಪ್ರಸಾರ ಪ್ರಾರಂಭವಾಗುವ ದಿನಾಂಕಕ್ಕಿಂತ 7 ದಿವಸ ಮೊದಲು ಅರ್ಜಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಉದ್ದೇಶಿತ ಜಾಹೀರಾತು ಪ್ರಚಾರದ ಎರಡು ಪ್ರತಿಗಳು ಮತ್ತು ಅದರ ಸಮಭಾಷಣೆಯ ಹಸ್ತ ಪ್ರತಿಯನ್ನು ಲಗತ್ತಿಸಿರಬೇಕು. ಪ್ರಚಾರದ ಯಾವುದೇ ಭಾಗ ತೆಗೆದು ಹಾಕಲು, ಮಾರ್ಪಡಿಸಲು ಪರಿಶೀಲನಾ ಸಮಿತಿಗೆ ಅಧಿಕಾರವಿರುತ್ತದೆ ಎಂದು ಹೇಳಿದರು.

Leave a Reply

Your email address will not be published. Required fields are marked *

Trending

Exit mobile version