ರಾಜಕೀಯ

ಶ್ರೀಲಂಕಾ ಸರ್ಕಾರ ಪತನ; 2019ರ ಜನವರಿಯಲ್ಲಿ ಚುನಾವಣೆ ಘೋಷಣೆ

Published

on

ಸುದ್ದಿದಿನ, ಶ್ರೀಲಂಕಾ: ಬಹುಮತ ಕೊರತೆಯಿಂದ ಶ್ರೀಲಂಕಾದ ಯುಪಿಎಫ್‌ಎ ನೇತೃತ್ವದ ಸರ್ಕಾರ ಪತನವಾಗಿದೆ. ಶ್ರೀಲಂಕಾ ಸರ್ಕಾರದ ಅಧ್ಯಕ್ಷ ಮೈತ್ರೊಪಾಲ್ ಸಿರಿಸೇನಾ, ರಾಜಕೀಯ ಬಿಕ್ಕಟ್ಟು ಪರಿಹರಿಸಲು ಸಾಧ್ಯವಾಗದ ಕಾರಣ ಶುಕ್ರವಾರ ತಡರಾತ್ರಿ ಸರ್ಕಾರವನ್ನು ವಿಸರ್ಜನೆ ಮಾಡಿದರು.

ಸರ್ಕಾರದ ವಿಸರ್ಜನೆಯ ಕುರಿತು ಗೆಝೆಟ್ ನೀಡಿ, 225 ಸದಸ್ಯರುಳ್ಳ ವಿಧಾನಸಭೆಯ ಬಹುಮತವನ್ನು ವಿಸರ್ಜನೆ ಮಾಡಿ, 2019ರ ಜನವರಿ 5ರಂದು ಸಾರ್ವತ್ರಿಕ ಚುನಾವಣೆ ನಡೆಸಲು ಘೋಷಣೆ ಮಾಡಿದರು. 2015ರಲ್ಲಿ ರಚನೆಯಾಗಿದ್ದ ಶ್ರೀಲಂಕಾ ಸರ್ಕಾರ ವರ್ಷಗಳ ಬಳಿಕ ಪತನಗೊಂಡಿದೆ.

ಅಧ್ಯಕ್ಷ ಸಿರಿಸೇನಾ ಅವರು ಪ್ರಧಾನಿ ರಣಲ್ ವಿಕ್ರಸಿಂಶಿ ಸಹಕಾರದೊಂದಿಗೆ ಸರ್ಕಾರ ರಚನೆ ಮಾಡಿದ್ದರು. ದಿಢೀರ್‌ನೇ ಉಂಟಾದ ಬೆಳವಣಿಗೆಯಿಂದ ಸಿರಿಸೇನಾ ವಿಕ್ರಸಿಂಶಿ ಅವರನ್ನು ವಜಾಗೊಳಿಸಿದ್ದರು. ಇವರ ಸ್ಥಾನದಲ್ಲಿ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಷಾ ಅವರನ್ನು ನೇಮಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version