/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಪತನಗೊಂಡ ವಿಮಾನ ಹಾರಾಟಕ್ಕೆ ಯೋಗ್ಯವಾಗಿರಲಿಲ್ಲ

Published

on

ಸುದ್ದಿದಿನ ಡೆಸ್ಕ್: ಮುಂಬಯಿ ಹೊರ ವಲಯದ ಘೋಟಕ್‍ಪುರದಲ್ಲಿ ನಿರ್ಮಾಣ ಹಂತದ ಕಟ್ಟಡದ ಮೇಲೆ ವಿಮಾನವೊಂದು ಪತನಗೊಂಡಿದ್ದು, ವಿಮಾನದಲ್ಲಿದ್ದ ನಾಲ್ಕವರು ಪೈಲಟ್‍ಗಳು ಹಾಗೂ ಸೇವಾ ನಿರತನಾಗಿದ್ದ ಕಟ್ಟಡ ಕಾರ್ಮಿಕ ಸಾವಿಗೀಡಾಗಿದ್ದಾರೆ.

ಉತ್ತರ ಪ್ರದೇಶದ ಯುವೈ ವೈಮಾನಿಕ ಸಂಸ್ಥೆಗೆ ಸೇರಿದ ಈ ವಿಮಾನವು ಹಾರಾಟಕ್ಕೆ ಯೋಗ್ಯವಾಗಿರಲಿಲ್ಲ. 26 ವರ್ಷದ ಈ ವಿಮಾನವನ್ನು ಹಾರಾಟಕ್ಕೆ ಯತ್ನಿಸಿ ನಾಲ್ಕೈದು ಬಾರಿ ವಿಫಲವಾಗಿತ್ತು. ಅದಕ್ಕೂ ಮೊದಲು ಹಲವಾರು ಮಾಲಿಕರು ಕೈಬದಲಾಯಿಸಿಕೊಂಡಿದ್ದರು. ಕೊನೆಗೆ ಅದು ಯುವೈಏವಿಯೇಶನ್‍ಗೆ ಸೇರಿಕೊಂಡಿತು. ಬಹು ದೊಡ್ಡ ರಿಪೇರಿ ಕೆಲಸ ಬಾಕಿ ಇದ್ದಾಗಲೇ ಈ ವಿಮಾನವನ್ನು ಹಾರಾಟ ಮಾಡಲಾಗಿದ್ದು, ಇದಕ್ಕೆ ಭಾರತೀಯ ವೈಮಾನಿಕ ಆಯೋಗವು ಅನುಮತಿ ನೀಡಿರಲಿಲ್ಲ ಎಂದು ತಿಳಿದಬಂದಿದೆ.

ಘಟನಾ ಸ್ಥಳಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆ ಏನು? ಯುವೈ ವೈಮಾನಿಕ ಸಂಸ್ಥೆಗೆ ಸೇರಿದ ಈ ವಿಮಾನವನ್ನು ಪರೀಕ್ಷಾರ್ಥ ಹಾರಾಟಕ್ಕಾಗಿ ಕೊಂಡೊಯ್ಯಲಾಗಿತ್ತು. ಮಾರ್ಗ ಮಧ್ಯೆ ಎಂಜಿನ್‍ನಲ್ಲಿ ದೋಷ ಕಂಡುಬಂದಿದ್ದು, ಪೈಲಟ್‍ಗಳು ತಕ್ಷಣವೇ ವಿಷಯ ಮುಟ್ಟಿಸಿದ್ದಾರೆ. ಅಷ್ಟರ ವೇಳೆಗೆ ವಿಮಾನದ ಎಂಜಿನ್ ವಿಫಲಗೊಂಡು ಟ್ಯಾಂಕ್ ಹೊತ್ತಿ ಬೆಂಕಿಯುಂಡೆಯಾಗಿ ಕಟ್ಟಡದ ಮೇಲೆ ಉರುಳಿ ಬಿತ್ತು.

ವಿಮಾನವು ಹೊತ್ತಿ ಉರುಳುತ್ತಿದ್ದ ವಿಡಿಯೊವನ್ನು ಸಾಮಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಲಾಗಿದ್ದು, ಅದು ವೈರಲ್ ಆಗಿದೆ. ಕಟ್ಟಡದ ಕೆಳಗೆ 38 ಮಂದಿ ಕೆಲಸ ನಿರ್ವಹಿಸುತ್ತಿದ್ದು, ಅವರೆಲ್ಲಾ ಬಚಾವ್ ಆಗಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9996715401

Leave a Reply

Your email address will not be published. Required fields are marked *

Trending

Exit mobile version