ದಿನದ ಸುದ್ದಿ
ಚಿರತೆ ದಾಳಿಗೆ ಹೊಸದುರ್ಗ ಜನರ ಆತಂಕ
ಸುದ್ದಿದಿನ,ಹೊಸದುರ್ಗ: ಸತತ ಚಿರತೆ ದಾಳಿಯಿಂದ ಹೊಸದುರ್ಗದ ಜನತೆ ಆತಂಕಗೊಂಡಿದ್ದಾರೆ. ಪಟ್ಟಣದ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಚಿರತೆ ದಾಳಿ ನಡೆಸಿ ಹನುಮಕ್ಕ ಎಂಬುವರರನ್ನು ತೀವ್ರವಾಗಿ ಗಾಯಗೊಳಿಸಿದೆ. ಪದೇಪದೇ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು ಜನ ಆತಂಕದ ಜೀವನ ನಡೆಸುತ್ತಿದ್ದಾರೆ.
ಮನೆಕೆಲಸಕ್ಕೆ ಹೊರಟಿದ್ದ ಹನುಮಕ್ಕ ಅವರ ಮೇಲೆ ದಾಳಿ ನಡೆಸಿದ ಚಿರತೆ ಗಾಯಗೊಳಿಸಿದೆ. ನಂತರ ಬೈಕ್ ಸವಾರನ ಮೇಲೆ ದಾಳಿ ನಡೆಸಲು ಯತ್ನಿಸಿದೆ. ಜನ ಕೂಗಿಕೊಂಡಿದ್ದರಿಂದ ಓಡಿ ಹೋಗಿದೆ ಎಂದು ನಾಗರಿಕರು ಮಾಹಿತಿ ನೀಡಿದ್ದಾರೆ. ಚಿರತೆಯಿಂದ ಗಾಯಗೊಂಡ ಮಹಿಳೆ ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.