ಲೈಫ್ ಸ್ಟೈಲ್
ಚಂದನವನದಲ್ಲಿ ವೈರಲ್ ಆಯ್ತು ‘ಚಂದನ’ ರ ಕುಂಚದಿ ಅರಳಿದ ಕಲರ್ಫುಲ್ ಚಿಟ್ಟೆ …!
ಚಂದನವನದಲ್ಲಿ ಗರಿಗೆದರಿತು “ಚಿಟ್ಟೆ” ಯ ಹಾರಾಟ
ಇತ್ತೀಚಿಗೆ ಸ್ಯಾಂಡಲ್ ವುಡ್ ಪ್ರಿಂಸೆಸ್ ನಟಿ ಹರ್ಷಿಕಾ ಪೂಣಚ್ಚ ತಮ್ಮ ಮೈ ಮೇಲೆ ಸುಂದರವಾದ ಬಣ್ಣದ ಚಿಟ್ಟೆಯ ಚಿತ್ತಾರವನ್ನು ಹಾಕಿಸಿಕೊಂಡಿದ್ದಾರೆ. ಹರ್ಷಿಕಾ ತಮ್ಮ “ಚಿಟ್ಟೆ” ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರಕ್ಕಾಗಿ ಪಾತರಗಿತ್ತಿಯ ಚಿತ್ರದ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಹರ್ಷಿಕಾ ರ ಈ ಚಿತ್ರ ಸೋಷಿಯಲ್ ಮೀಡಿಯಾ ದಲ್ಲಿ ಈಗ ಭಾರಿ ವೈರಲ್ ಆಗಿದ್ದು, ಸಿನಿ ಪ್ರಿಯರಲ್ಲಿ ಈ ಚಿತ್ರದ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಿದೆ.
ಅಂದಹಾಗೆ , ಸುಂದರಿಯ ಬೆನ್ನ ಏರಿರುವ ಚಿಟ್ಟೆಯ ಹಿಂದಿನ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ…ಈ ಚಿತ್ರಕ್ಕಾಗಿ ಹರ್ಷಿಕಾ ಮೈ ಮೇಲೆ ವಸ್ತ್ರ ವಿನ್ಯಾಸಕಿ ಚಂದನಾ ಆರಾಧ್ಯ ಅವರು ಚಿತ್ರ ಬಿಡಿಸಿದ್ದಾರೆ. ಹರ್ಷಿಕಾ ಮೈ ಮೇಲೆ ಚಿಟ್ಟೆ ಚಿತ್ರ ಬಿಡಿಸುವಾಗ ಚಂದನಾ ತುಂಬ ಜಾಗೃತವಾಗಿ ಸತತ 4 ಗಂಟೆಗಳ ಪರಿಶ್ರಮದಲ್ಲಿ ಸುಂದರ ಚಿಟ್ಟೆಯನ್ನು ಸೃಷ್ಟಿಸಿದ್ದಾರೆ. ಸುಮಾರು 12 ಗಂಟೆಗಳ ಕಾಲ ಹರ್ಷಿಕಾ ಅವರ ಮೈ ಮೇಲೆ ಚಿಟ್ಟೆಯ
ಯಾರು ಈ ಚಂದನ ಆರಾಧ್ಯ..?
ಇನ್ನು ಚಂದನ ಆರಾಧ್ಯ ಚಿಕ್ಕ ವಯಸ್ಸಿನಲ್ಲಿಯೇ ಫ್ಯಾಷನ್ ದುನಿಯಾದಲ್ಲಿ ದೊಡ್ಡ ಸಾಧನೆ ಮಾಡುತ್ತಿರುವ ಇವರು ಫ್ಯಾಷನ್ ವಿನ್ಯಾಸ ಸಂಸ್ಥೆಯ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವುಗಳಲ್ಲಿ 12 ಗಂಟೆಗಳ ಕಾಲ ಸತತವಾಗಿ ಫ್ಯಾಷನ್ ಶೋ ಮಾಡಿದ ವಿಷಯ “ಲಿಮ್ಕಾ” ದಾಖಲೆಯಲ್ಲಿ ನಮೂದಿಸಲ್ಪಟ್ಟಿರುವುದು ಹೆಮ್ಮೆಯ ವಿಷಯ. ಇನ್ನು ಹೆಚ್ಚಿನ ಸಾಧನೆ ಇವರಿಂದ ಜರುಗಲಿ ಮತ್ತು ಅನೇಕ ಯುವತಿಯರು ಇವರ ಫ್ಯಾಷನ್ ಡಿಸೈನಿಂಗ್ ಅನ್ನು ಕಲಿತು ಜೀವನ ರೂಪಿಸಿಕೊಳ್ಳಲಿ ಹಾಗೂ ಇವರ ನೂತನ ನಿರ್ಮಾಣದ “ವಿನ್ಯಾಸ” ಎಂಬ ಶಾಲೆ ಬೆಳೆಯಲಿ ಎಂದು ಹಾರೈಸೋಣ.