ದಿನದ ಸುದ್ದಿ

ಯೋಧರ ಆರೋಗ್ಯ ಕಾಪಾಡುಲು ಕೇಂದ್ರದಿಂದ ಯೋಜನೆ ಶುರು

Published

on

ಸುದ್ದಿದಿನ ಡೆಸ್ಕ್: ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಸೈನಿಕರಿಗಾಗಿ ಮಹತ್ತರ ಯೋಜನೆ ಅನುಷ್ಠಾನಕ್ಕಾಗಿ ಮುಂದಾಗಿದ್ದು, ಸಿಯಾಚೀನ್ ಸೇರಿದಂತೆ ಕಠಿಣ ಸ್ಥಳದಲ್ಲಿ ದೇಶ ಕಾಯುವ ಸೈನಿಕರಿಗೆ ಆರೋಗ್ಯ ಸೌಲಭ್ಯ ಒದಗಿಸಲು ರಕ್ಷಣಾ ಇಲಾಖೆ ಇಸ್ರೋದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಇಸ್ರೋ ಅಂಗಸಂಸ್ಥೆಯಾದ ಡೆವಲಪ್ಮೆಂಟ್ ಆ್ಯಂಡ್ ಎಜುಕೇಷನ್‌ ಕಮ್ಯುನಿಕೇಷನ್ ಯುನಿಟ್, ಅಹಮದಾಬಾದಿನ ಬಾಹ್ಯಾಕಾಶ ವಿಭಾಗ, ಸಹಯೋಗದಲ್ಲಿ ಕೈಗೊಂಡಿರುವ ಯೋಜನೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ದೇಶಾದ್ಯಂತ ಭೂಸೇನೆ, ನೌಕನೆಲೆ, ವಾಯುಸೇನೆಯ 53 ಸ್ಥಳಗಳಲ್ಲಿ ಯೋಜನೆ ಆರಂಭಸಲಿದೆ. ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನಿನಲ್ಲಿ ಆರೋಗ್ಯ ಸೌಲಭ್ಯ ಇಲ್ಲವಾಗಿದೆ. ನಾಲ್ಕಕ್ಕೂ ಅಧಿಕ ಕೇಂದ್ರ ಆರಂಭಿಸಲಿದೆ.

ಪ್ರತಿಕೂಲ ವಾತಾವರಣ ಮತ್ತು ಹವಾಮಾನ ಪರಿಸ್ಥಿತಿಗಳಿಂದಾಗಿ ವರ್ಷದಲ್ಲಿ ಹಲವು ತಿಂಗಳವರೆಗೆ ಸಿಬ್ಬಂದಿ ಇಲ್ಲಿ ನಿಯೋಜನೆ ಮಾಡುವುದಿಲ್ಲ. ಇಂತಹ ವಾತಾವರಣದಲ್ಲಿ ಬೃಹದಾಕಾರದ ಮಂಜುಗಡ್ಡೆಗಳೇ ದೊಡ್ಡ ಶತ್ರುಗಳಾಗಿ ಎದುರಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಟೆಲಿಮೆಡಿಸಿನ್ ಸೌಲಭ್ಯ ಬಳಕೆ ಬರಲಿದೆ. ಸ್ಥಳಕ್ಕೆ ಜೀವರಕ್ಷಕ ಔಷಧಗಳನ್ನು ರವಾನಿಸಲಿದೆ. ಕಠಿಣ, ಅಚ್ಚುಕಟ್ಟಿನ ಸ್ಥಳಗಳಲ್ಲಿ ದೇಶ ಕಾಯುತ್ತಿರುವ ಯೋಧರಿಗೆ ಇಸ್ರೋ ವೈದ್ಯಕೀಯ ಸೌಲಭ್ಯ ಒದಗಿಸಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version