ಸಿನಿ ಸುದ್ದಿ

ದಿ ಗ್ರೇಟ್ ಇಂಡಿಯನ್ ಕಿಚನ್ : ಮಹಿಳಾ ಅಸಮಾನತೆಯ ಕರಾಳ ಜಗತ್ತಿನ ಚಿತ್ರಣ

Published

on

ಸಿನೆಮಾ ಪೋಸ್ಟರ್
  • ಕ್ರಾಂತಿರಾಜ್ ಒಡೆಯರ್, ಸಹಾಯಕ ಪ್ರಾಧ್ಯಾಪಕರು, ಮೈಸೂರು

ಜಗತ್ತಿನ ಎಲ್ಲಾ ಧರ್ಮಗಳು ತಮ್ಮ ಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರುತ್ತವೆ. ಆದರೆ ಮಹಿಳೆಯರಿಗೆ ಸ್ವಾತಂತ್ರ ಕೊಡಬಾರದೆಂಬ ವಿಷಯದಲ್ಲಿ ಎಲ್ಲಾ ಧರ್ಮಗಳೂ ಜೊತೆಯಾಗಿ ನಿಲ್ಲುತ್ತವೆ.”

ಹಲವು ಶತಮಾನಗಳಿಂದ ಆಚರಣೆ ಮಾಡಿಕೊಂಡು ಬಂದಿರುವ ಮಹಿಳಾ ವಿರೋಧಿ ಸಂಪ್ರದಾಯ ಹಾಗೂ ಗಂಡಸು ಜಾತಿಯ ಕೆಟ್ಟ ಅಹಂಕಾರವನ್ನು ಎಳೆಎಳೆಯಾಗಿ ಬಿಡಿಸಿಡುವ ಚಿತ್ರ ‘ದಿ ಗ್ರೇಟ್ ಇಂಡಿಯನ್ ಕಿಚನ್‘.

ಚಿತ್ರದ ಸಾರಾಂಶ: ವರದಕ್ಷಿಣೆ ಜೊತೆಗೆ ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣು, ಅವಳ ಅತ್ತೆಯು ಜೊತೆಗೂಡಿ ಮನೆಯಲ್ಲಿನ ಗಂಡಸರ ಸೇವೆ ಮಾಡುವುದೇ ಅವಳ ಕಾಯಕ. ಸರಿಯಾದ ಸಮಯಕ್ಕೆ ಕೇಳಿದ ತಿಂಡಿ, ಊಟ; ಅದುವೇ ಮನೆಯ ಗಂಡಸರು ಹೇಳಿದ ರೀತಿಯಲ್ಲಿಯೇ.

ಪೂಜೆ, ಪುರಸ್ಕಾರ ಹಾಗೂ ಮನೆಯ ಕಟ್ಟಾ ಸಂಪ್ರದಾಯ ಪಾಲನೆ, ಗಂಡಸರಿಗೆ ಇಷ್ಟವಾಗುವ ರೀತಿಯಲ್ಲಿಯೇ ಅವರ ಬಟ್ಟೆಗಳನ್ನು ಒಗೆಯುವುದು ಮತ್ತೊಂದು ಕೆಲಸ. ಇದರ ಜೊತೆ ಜೊತೆಗೇ ಗಂಡನಿಗೆ ಬೇಕೆಂದಾಗಲೆಲ್ಲಾ ಕಾಮದ ದಾಹವನ್ನು ತನಗೆ ಇಷ್ಟವಿರಲಿ ಇಲ್ಲದಿರಲಿ ತೀರಿಸುವುದು ಮದುವೆಯಾಗಿ ಹೋಗುವ ಹೆಣ್ಣಿನ ಕೆಲಸ.

ಗಂಡಸು, ತಿಂದ ತಟ್ಟೆಯನ್ನೂ ಪಕ್ಕಕ್ಕೆ ಜರುಗಿಸದ, ಎಂಜಲನ್ನೂ ಅಲ್ಲೇ ಬೀಸಾಡಿ ತನ್ನ ಕೆಲಸದಲ್ಲಿ ತೊಡಗುವ ಕ್ರೂರ ಮನಸ್ಸಿನ ಪ್ರಾಣಿ. ಅಷ್ಟೇ ಅಲ್ಲದೇ, ಮನೆಗೆ ಜಾರೂರಾಗಿ ಆಗಬೇಕಾಗಿರುವ ಕೆಲಸವನ್ನೂ ಮಾಡಿಸದೇ ಅಸಡ್ಡೆ ತೋರುವ ವ್ಯಕ್ತಿತ್ವ. ಜೊತೆಗೆ ಮಹಿಳಾ ಸಮಾನತೆ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಮಹಿಳೆಯರನ್ನು ಎಚ್ಚರಿಸುವ ಮಹಿಳೆಯರನ್ನು ಕೊಲೆ ಬೆದರಿಕೆ ಹಾಕಿ ಹೆದರಿಸುವ ಹಾಗೂ ಮಹಿಳೆ ಸ್ವಂತ ದುಡಿಮೆ ಮಾಡಲು ವಿರೋಧಿಸುವ ಮಾನಸಿಕ ಸ್ಥಿತಿ ಗಂಡಸಿನದು.

ಇದನ್ನೂ ಓದಿ | ಕೊರೋನಾ ಲಸಿಕೆ ಕುರಿತು ಇಂದು ಪಿಎಂ ನರೇಂದ್ರ ಮೋದಿ ಸಭೆ

ಇದೆಲ್ಲವನ್ನು ಸಹಿಸಿಕೊಳ್ಳದ ಮಹಿಳೆ, ತನಗೂ ಸ್ವಾತಂತ್ರ್ಯ ಬೇಕೆಂದು ಮನೆ ಬಿಟ್ಟು ತವರು ಮನೆ ಸೇರಿಕೊಂಡು, ಸ್ವಾವಲಂಬಿಯಾಗಿ ದುಡಿಯಲು ಪ್ರಾರಂಭಿಸಿದಾಗ, ಅವಳನ್ನು ಬಿಟ್ಟು ತನ್ನ ಸೇವೆ ಮಾಡಲು ಮತ್ತೊಂದು ಹೆಣ್ಣನ್ನು ಮದುವೆಯಾಗುವ ಗಂಡಸು.

ನಮ್ಮ ಸಮಾಜದ ಅನೈತಿಕ ಮನಸ್ಥಿತಿಯನ್ನು ನಿರ್ದೇಶಕ ಜೋ ಬೇಬಿ ನಮ್ಮ ಮುಂದೆ ಕನ್ನಡಿಯಾಗಿ ಈ ಚಿತ್ರವನ್ನು ನಿಲ್ಲಿಸಿದ್ದಾರೆ. ಎಲ್ಲರೂ ಕುಟುಂಬ ಸಮೇತ ಕೂತು ಚಿತ್ರ ನೋಡಿ. ಸಮಾಜ ಸ್ವಲ್ಪವಾದರೂ ಬದಲಾಗಬಹುದು.

ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದೆ..!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version