ದಿನದ ಸುದ್ದಿ
ಹೆಬ್ಬಾಳದಲ್ಲಿ ಸಿಕ್ಕ ಕಲ್ಲು ಹೇಳುತ್ತಾ ಬೆಂಗಳೂರು ಇತಿಹಾಸ?
ಸದ್ದಿದಿನ ಡೆಸ್ಕ್: ಬೆಂಗಳೂರಿನ ಹೆಬ್ಬಾಳದ ಮಾರಮ್ಮನ ದೇಗುಲದ ಬಳಿ ರಸ್ತೆ ಕಾಮಗಾರಿ ನಡೆಸುವಾಗ ಸಿಕ್ಕ ಕೆಲವು ಅಪರೂಪದ ಕಲ್ಲುಗಳು ಬೆಂಗಳೂರಿನ ಇತಿಹಾಸದ ಮೇಲೆ ಬೆಳಕು ಚೆಲ್ಲಲಿವೆ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಕಲ್ಲುಗಳ ಮೇಲೆ ಯೋಧನೊಬ್ಬ ಶತ್ರುವನ್ನು ಕೊಲ್ಲುವ ಚಿತ್ರವಿದೆ. ಜತೆಗೆ ಹಳೆಗನ್ನಡದಲ್ಲಿ ಬರೆಯಲಾಗಿದೆ. ಇತಿಹಾಸ ತಜ್ಞರು ಹೇಳುವ ಪ್ರಕಾರ ಇದು ಗಂಗರ ಕಾಲದಲ್ಲಿ ಕೆತ್ತನೆಯಾಗಿರುವ ಕಲಾಕೃತಿಯಾಗಿದೆ.
ಕ್ರಿ.ಶ. 750ರಲ್ಲಿ ಗಂಗರು ಕರ್ನಾಟಕದಲ್ಲಿ ಆಳ್ವಿಕೆ ನಡೆಸುವಾಗ ಈ ಕಲಾಕೃತಿಯನ್ನು ಕೆತ್ತಿಸಿರಬಹುದು. ಗಂಗರು ಕರ್ನಾಟಕದ ಅತಿ ಹಳೆಯ ರಾಜರು. ರಾಜೀವ ನೃಪತುಂಗ ಇದರ ಸಂಸ್ಥಾಪಕ ಈಕಲ್ಲುಗಳು 17ನೇ ಶತಮಾನಕ್ಕೆ ಸೇರಿದ್ದವಾಗಿವೆ. ಅಂದರೆ ಅದು ಗಂಗರ ಕಾಲಕ್ಕೆ ಸೇರಿದ್ದು ಎಂಬುದು ಸರಿಯಾದ ಮಾಹಿತಿ ಎಂದು ತಜ್ಞರು ಹೇಳಿದ್ದಾರೆ.