ದಿನದ ಸುದ್ದಿ
ಜಲಾವೃತ ಗೊಂಡಿರುವ ಕೊಳ್ಳೆಗಾಲ ; ಗಂಜಿ ಕೇಂದ್ರಗಳಿಗೆ ತೆರಳಲು ಸಚಿವ ಎನ್. ಮಹೇಶ್ ಸೂಚನೆ
ಸುದ್ದಿದಿನ ಡೆಸ್ಕ್ | ಕಾವೇರಿ ಕಬಿನಿಯಿಂದ ಹೆಚ್ಚು ನೀರು ಬಿಟ್ಟಿರುವ ಹಿನ್ನೆಲೆ ಜಲಾವೃತಗೊಂಡಿರುವ ಕೊಳ್ಳೆಗಾಲ ಭಾಗದ ಕಾವೇರಿ ನದಿ ಪಾತ್ರ. ಪ್ರವಾಹ ಪೀಡಿತ ಈ ಗ್ರಾಮಗಳಿಗೆ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಎನ್.ಮಹೇಶ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಅಗತ್ಯ ಕ್ರಮಕ್ಕೆ ಜಿಲ್ಲಾಡಳಿತ ಸಜ್ಜಾಗಿದ್ದು, ಗಂಜಿಕೇಂದ್ರಕ್ಕೆ ತೆರಳುವಂತೆ ಗ್ರಾಮಸ್ಥರಲ್ಲಿ ಶಿಕ್ಷಣ ಸಚಿವ ಮನವಿ ಮಾಡಿದ್ದಾರೆ.ಯಾವುದೇ ಸಂದರ್ಭದಲ್ಲಿ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆ ಇದ್ದು, ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೋಕಿನ ಕಾವೇರಿ ನದಿ ಪಾತ್ರದ ಹಳ್ಳಿಗಳು ಜಲಾವೃತವಾಗಲಿವೆ. ಆದರೂ ಸೂಕ್ತ ವ್ಯವಸ್ಥೆ ಕಲ್ಪಿಸಿ ಗ್ರಾಮಸ್ಥರು ಒತ್ತಾಯಿಸಿದ್ದು,
ಜಾನುವಾರು, ಹೊಲಗದ್ದೆ, ಮನೆ ಗ್ರಾಮ ಬಿಟ್ಟು ಬರುವುದಿಲ್ಲವೆಂದ ಗ್ರಾಮಸ್ಥರು.
ಸುದ್ದಿದಿನ.ಕಾಂ|ವಾಟ್ಸಾಪ್ |9986715401