/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ರಾಜಕೀಯ

ಕುರುಬ ಸಮುದಾಯಕ್ಕೆ 2 ಸಚಿವ ಸ್ಥಾನ ಬೇಕು : ಮಾಜಿ : ಸಚಿವ ಎಚ್.ಎಂ.ರೇವಣ್ಣ ಪಟ್ಟು

Published

on

ಸುದ್ದಿದಿನ, ಬೆಂಗಳೂರು : ಲೋಕಸಭೆ ಚುನಾವಣೆ ಪೂರ್ವ ಸೀಓಟರ್ ಸಮೀಕ್ಷೆಯಲ್ಲಿ ಬಿಜೆಪಿಗೆ ಬಹಮತ ವಿಚಾರ‌‌ವಾಗಿ 5 ವರ್ಷದಲ್ಲಿ ಬಿಜೆಪಿ ನೀಡಿದ ಭರವಸೆ ಒಂದೂ ಕೂಡಾ ಈಡೇರಿಲ್ಲ ಎಂದು ಮಾಜಿ ಸಚಿವ ಹೆಚ್‌‌.ಎಂ.ರೇವಣ್ಣ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ‌ ತಿಳಿಸಿದರು.

ಸಮೀಕ್ಷೆ ವರದಿ ಅಷ್ಟು ಸಮಂಜಸವಲ್ಲ. ವರದಿ ಪ್ರಕಾರ ಬಿಜೆಪಿಯೇ ಬರುತ್ತೆ ಅಂತ ಇಲ್ಲ.ರಾಜ್ಯದಲ್ಲಿ ಸಮ್ಮೀಶ್ರ ಸರ್ಕಾರ ಸುಭದ್ರವಾಗಿದೆ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಸ್ಥಳಿಯ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಅಭ್ಯರ್ಥಿಗಳಿಗೆ ಮೇಲುಗೈ ಆಗಿದೆ ಎಂದು ಹೇಳಿದರು.

ಸಂಪುಟ ಪುನರ್ ರಚನೆ ವಿಚಾರ

ಎಲ್ಲ ರಾಜ್ಯಗಳಲ್ಲಿ ವಿಧಾನಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡಿ ಗೌರವ ನೀಡಿದೆ. ಹೀಗಾಗಿಯೇ ಮುಂದಿನ ಸಂಪುಟ ಪುನರ್ ರಚನೆ ವೇಳೆ ಪರಿಷತ್ತಿನ ಹಿರಿಯ ಸದಸ್ಯರಿಗೆ ಅವಕಾಶ ನೀಡಬೇಕು. ಕೇವಲ ಮೇಜು ತಟ್ಟಿ ಗಲಾಟೆ ಮಾಡೋರಿಗೆ ಸಚಿವ ಸ್ಥಾನ ನೀಡಬಾರದು. ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡಿದ್ರೆ ವರಿಷ್ಟರ ನಂಬಿಕೆ ಅಂತೆ ಕೆಲಸ ಮಾಡುವೆವು ಎಂದು ಸಂಪುಟ ವಿಸ್ತರಣೆಗೂ ಮುನ್ನ ಒತ್ತಡ ತಂತ್ರ ಅನುಸರಿಸಿದರು ಮಾಜಿ ಸಚಿವ ಹೆಚ್‌ಎಂ ರೇವಣ್ಣ.

ನಾನು ಕೂಡಾ ಓರ್ವ ಆಕಾಂಕ್ಷಿ

ನಮ್ಮ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕು ಎಂಬುದು ನಮ್ಮ ಒತ್ತಡ. ಸಮುದಾಯದಲ್ಲಿ ಎಂ.ಟಿ.ಬಿ.ನಾಗರಾಜ್ ಹೆಸರೂ ಕೂಡಾ ಮುಂಚೂಣಿಯಲ್ಲಿದೆ. ನಾಗರಾಜ್ ಕರಕೊಂಡು ಬಂದು ಬೆಳೆಸಿದವರಲ್ಲಿ ನಾನು ಒಬ್ಬ.ನಮ್ಮ ಸಮುದಾಯದಲ್ಲಿ ಕಾಂಗ್ರೆಸ್‌ ನಿಂದ ಮಂತ್ರಿ ಇಲ್ಲ.ನಮ್ಮ ಸಮಯದಾಯಕ್ಕೆ ಸರಿಯಾದ ಸ್ಥಾನಮಾನ ಸಿಗಬೇಕು.ನ್ಯಾಯಯುತ ನಮ್ಮ ಬೇಡಿಕೆಗೆ ಮನ್ನಣೆ ಸಿಗದೇ ಇದ್ರೆ ಸರಿ ಅನ್ಸಲ್ಲ‌.ಕಾಂಗ್ರೆಸ್ ಭಾಕಿ ಉಳಿದ ಸಚಿವ ಸ್ಥಾನದಲ್ಲಿ 2 ಸ್ಥಾನ ಕುರುಬ ಸಮುದಾಯಕ್ಕೆ ನೀಡಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version