ದಿನದ ಸುದ್ದಿ

ಗಂಡನ ಕಿರುಕುಳಕ್ಕೆ ಬೇಸತ್ತು ಹೆತ್ತ ಮಗುವನ್ನೇ ನದಿಗೆ ಎಸೆದ ತಾಯಿ..!

Published

on

Photo Courtesy: Indian Express

ಸುದ್ದಿದಿನ ಡೆಸ್ಕ್ | ಮೈಸೂರಿನಲ್ಲಿ ಗುರುವಾರ ಮನಕಲಕುವ ಘಟನೆ ಸಂಭವಿಸಿದ್ದು, ತಾಯಿಯೊಬ್ಬಳು ಹದಿನೈದು ದಿನಗಳ ನವಜಾತ ಹೆಣ್ಣು ಶಿಶುವನ್ನು ನದಿಗೆ ಎಸೆದಿದ್ದಾಳೆ. ನದಿಗೆ ಮಗುವನ್ನು ಎಸೆಯಲು ಆಕೆಗೆ ಮನಸ್ಸಾದರೂ ಹೇಗೆ ಬಂತು. ಎಂಥಾ ಪರಿಸ್ಥಿತಿ ಎದುರಾಗಿತ್ತು ಎನ್ನಬಹುದು ನೀವು. ಇದಕ್ಕೆ ಕಾರಣ ಆಕೆಯ ಗಂಡ. ಯಾಕಂತೀರಾ?

ಕಳೆದ ವರ್ಷ (2017) ಆಗಸ್ಟ್ ನಲ್ಲಿ ಬೆಂಗಳೂರಿನ ಮಹಿಳೆಯೊಬ್ಬಳು ಮಹಡಿ ಮೇಲಿಂದ ಕೆಳಕ್ಕೆ ಎಸೆದಿದ್ದರು. ಆನಂತರ ಆಕೆ ಮಾನಸಿಕ ಅಸ್ವಸ್ಥತೆ ಎಂಬುದು. ಆದರೆ, ಮೈಸೂರಿನಲ್ಲಿ ನಡೆದ ಘಟನೆಯೇ ಬೇರೆ. ಮಹಿಳೆಗೆ ಆಕೆಯ ಗಂಡ ಹೆಣ್ಣು ಮಗು ಹೆತ್ತಳೆಂದು ಕಿರುಕುಳ ನೀಡಿದ್ದರಿಂದ ಮಾನಸಿಕವಾಗಿ ಹತಾಶೆಗೊಂಡು ಕಣ್ಣು ಬಿಡದ ಕಂದಮ್ಮನನ್ನು ನದಿಗೆ ಎಸೆದು ಬಿಟ್ಟಿದ್ದಾಳೆ.

ಮಹಿಳೆಯಲ್ಲಿ ಇಂತಹ ಅಪರಾಧ ಮನೋಭಾವ ಬರಲು ಹೇಗೆ ಸಾದ್ಯವಾಯಿತು ಎಂಬುದೇ ನಿಗೂಢ. ಪ್ರಸವ ಪೂರ್ವ ಮತ್ತು ನಂತರದಲ್ಲಿ ಮಹಿಳೆಯರ ಮಾನಸಿಕ ಸಮಸ್ಯೆಗಳಿಗೆ ಒಳಗಾಗಿರುತ್ತಾಳೆ. ಪ್ರಸವಾನಂತರದ ಖಿನ್ನತೆ ಮಾನಸಿಕ ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬುದು ತಜ್ಞರ ಅನಿಸಿಕೆ ಎಂದು ಟಿಎನ್ಎಂ ಸುದೀರ್ಘ ವರದಿ ಮಾಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version