ದಿನದ ಸುದ್ದಿ

ಎರಡನೇ ಮದುವೆಗೆ ಕುಟುಂಬದವರು ಒಪ್ಪದ ಕಾರಣ ಕರೆಂಟ್ ಕಂಬ ಏರಿದ ವೃದ್ಧ..!

Published

on

ಸುದ್ದಿದಿನ,ಜೈಪುರ: ತನ್ನಬಕುಟುಂಬಸ್ಥರು ಎರಡನೇ ಮದುವೆಗೆ ಒಪ್ಪದ ಕಾರಣ ಕೋಪಗೊಂಡ 60 ವರ್ಷದ ವೃದ್ಧ 11 ಸಾವಿರ ವೋಲ್ಟೇಜ್ ಇರುವ ಕರೆಂಟ್ ಕಂಬ ಹತ್ತಿ ಕುಳಿತ ವಿಚಿತ್ರ ಘಟನೆ ರಾಜಸ್ಥಾನದ ಧೋಲ್ಪುರ್ ಜಿಲ್ಲೆಯಲ್ಲಿ ನಡೆದಿದೆ.

ವೃದ್ಧ ಸೊಬ್ರಾನ್ ಗೆ ಈಗಾಗಲೇ ಮದುವೆಯಾಗಿದ್ದು, ಪತ್ನಿ ತೀರಿಕೊಂಡಿದ್ದಾರೆ. ಈ ದಂಪತಿಗೆ 5 ಮಂದಿ ಮಕ್ಕಳಿದ್ದಾರೆ. ಮೊದಲ ಪತ್ನಿ ಸಾವನ್ನಪ್ಪಿದ ನಂತರ ಮತ್ತೆ ಎರಡನೇ ಮದುವೆ ಮಾಡಿಕೊಳ್ಳುವುದಾಗಿ ವೃದ್ಧ ಕುಟುಂಬಸ್ಥರ ಮುಂದೆ ಪ್ರಸ್ತಾಪ ಮಾಡಿದ್ದು, ವೃದ್ಧನ ಮಾತಿಗೆ ಮನೆಯವರು ಒಪ್ಪಿಗೆ ನೀಡಿರಲಿಲ್ಲ.

ಮದುವೆಗೆ ಮನೆಯವರು ಒಪ್ಪದ ಕಾರಣ ನೊಂದ ವೃದ್ಧ ಕರೆಂಟ್ ಕಂಬ ಏರಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಅಲ್ಲದೆ ಕೆಳಗೆ ಇಳಿಯುವಂತೆ ಕೇಳಿಕೊಂಡಿದ್ದಾರೆ. 11 ಸಾವಿರ ವೋಲ್ಟೇಜ್ ಇರುವ ಹೈ ಟೆನ್ಶನ್ ವೈರ್ ಇದ್ದರೂ ವೃದ್ಧ ಕಂಬ ಹತ್ತಿದ ದಿನ ಕರೆಂಟ್ ಇರಲಿಲ್ಲ.

ಇದನ್ನೂ ‌ಓದಿ‌ | ಬ್ಯಾಂಕ್ ಖಾಸಗೀಕರಣ ವಿರೋಧಿಸಿ ದೇಶವ್ಯಾಪಿ 2 ದಿನದ ಬ್ಯಾಂಕ್ ಮುಷ್ಕರ

ವಿಷಯ ಪೊಲೀಸರ ಗಮನಕ್ಕೆ ಬಂದ ಕೂಡಲೇ ವೃದ್ಧನ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ ಘಟನೆ ಬಗ್ಗೆ ಮಾಹಿತಿ ಅರಿತ ವಿದ್ಯುತ್ ಇಲಾಖೆಯು ಆ ಪ್ರದೇಶದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದೆ. ಹೀಗಾಗಿ ಭಾರೀ ಅವಘಡದಿಂದ ವೃದ್ಧ ಪ್ರಾಣಾಪಾಯದಿಂ ಪಾರಾಗಿದ್ದಾನೆ. ಕುಟುಂಬ ಹಾಗೂ ನೆರೆಹೊರೆಯವರು ಪರಿಪರಿಯಾಗಿ ಕೇಳಿ ಕೊಂಡ ಬಳಿಕ ವೃದ್ಧ ಕರೆಂಟ್ ಕಂಬದಿಂದ ಕೆಳಗಿದಿದ್ದಾನೆ.

ವೃದ್ಧನ ಪತ್ನಿ 4 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಈ ದಂಪತಿಗೆ ಮೂವರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ಐದು ಮಂದಿ ಮಕ್ಕಳಿಗೂ ಮದುವೆ ಆಗಿದ್ದು, ಮಕ್ಕಳು ಕೂಡ ಇವೆ. ಈ ಮಧ್ಯೆ ವೃದ್ಧ ಕೆಲ ದಿನಗಳಿಂದ ತಾನು ಎರಡನೇಯ ಮದುವೆಯಾಗಬೇಕೆಂಬ ಆಸೆಯನ್ನು ಕುಟುಂಬದ ಮುಂದಿಟ್ಟಿದ್ದಾನೆ. ಆದರೆ ಮಕ್ಕಳು ಮಾತ್ರ ಇದಕ್ಕೆ ಒಪ್ಪಿರಲಿಲ್ಲ. ಇದರಿಂದ ಬೇಸರಗೊಂಡ ವೃದ್ಧ ವಿದ್ಯುತ್ ಕಂಬ ಏರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕುವ ಮೂಲಕ ನಾಟಕವಾಡಿದ್ದಾನೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version