ದಿನದ ಸುದ್ದಿ

ಬೆಂಗಳೂರಿನ ಸೆಂಟ್ರೆಲ್ ಅಬಕಾರಿ ಆಯುಕ್ತರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು

Published

on

ಹಲ್ಲೆ ನಡೆಸಿದವರು

ಸುದ್ದಿದಿನ ಡೆಸ್ಕ್ | ಆಗಸ್ಟ್ 9 ರ ರಾತ್ರಿ ಕುಟುಂಬದ ಜೊತೆ ದೆಹಲಿಗೆ ತೆರಳುವ ವೇಳೆ ಸೂನಪ್ಪನಹಳ್ಳಿ MVIT ಬಳಿ ಹಲ್ಲೆ ಮಾಡಿದ ಮೂರು ಜನ ದುಷ್ಕರ್ಮಿಗಳು

ಹೋಡಾ ಅಮೆಜ್ ಕಾರ್ ನಲ್ಲಿ ಬಂದು ಅಡ್ಡ ಗಟ್ಟಿ ಮೊದ್ಲು ಡ್ರೈವರ್ ಗೆ ಹಲ್ಲೆ ಡ್ರೈವರ್ ರಕ್ಷಣೆಗೆ ತೆರಳಿದ ಆಯುಕ್ತರ ಮುಖಕ್ಕೆ ಪಂಚ್ ಕೊಟ್ಟು ಬಟ್ಟೆ ಹರಿದು ಹಲ್ಲೆ ಮಾಡಿದ್ದರು.ಯಲಹಂಕದಿಂದ ಕೆಂಪೇಗೌಡ ಅಂತರರಾಷ್ಟಿಯ ವಿಮಾನ ನಿಲ್ದಾಣದಕ್ಕೆ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ದುಷ್ಕರ್ಮಿಗಳ ಪೊಟೊ ಹಾಗೂ ಅವರ ಕಾರ್ ನಂಬರ್ ಪೊಟೊ ತೆಗದುಕೊಂಡಿದ್ದರು ಕಾರ್ ಚಾಲಕ ಸಂಪತ್ ಕುಮಾರ್.

ಆಯುಕ್ತರನ್ನು ಏರ್ ಪೊರ್ಟ್ ಡ್ರಾಪ್ ಮಾಡಿದ ಬಳಿಕ ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಚಾಲಕ ಸಂತೋಷ್. ನಂತರ ಮಂಜುನಾಥ್, ರಮೇಶ್, ವಿನಯ್ ಕುಮಾರ್ ರನ್ನು ಬಂಧಿಸಿದ ಚಿಕ್ಕಜಾಲ ಪೊಲೀಸರು.ವಿಚಾರಣೆ ವೇಳೆಯಲ್ಲಿ ಮಧ್ಯಸೇವಿಸಿ ಹಣ ಸುಲಿಗೆ ಮಾಡಲು ರಸ್ತೆಗೆ ಅಡ್ಡ ಹಾಕಿ ಹಲ್ಲೆ ಮಾಡಿದ್ದಾಗಿ ತಪ್ಪೋಪ್ಪಿಗೆ ಕೊಟ್ಟಿದ್ದಾರೆ.ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version