ದಿನದ ಸುದ್ದಿ
ಪೊಲೀಸ್ ಇಲಾಖೆಗೆ ಆಧಾರ್ ದತ್ತಾಂಶ ಬೇಕಂತೆ
ಆಧಾರ್ ದತ್ತಾಂಶದ ಸೀಮಿತ ಮಾಹಿತಿಗಳನ್ನು ಪೊಲೀಸ್ ಇಲಾಖೆಗೆ ನೀಡಬೇಕೆಂದು ರಾಷ್ಟ್ರೀಯ ಅಪರಾಧ ಸಂಗ್ರಹ ಕಂದ್ರ (ಎನ್‍ಸಿಆರ್‍ಬಿ) ಮುಖ್ಯಸ್ಥ ಇಶ್ ಕುಮಾರ್ ಅವರು ಒತ್ತಾಯಿಸಿದ್ದಾರೆ.
ಸುದ್ದಿದಿನ ಡೆಸ್ಕ್: ಆಧಾರ್ ದತ್ತಾಂಶದ ಸೀಮಿತ ಮಾಹಿತಿಗಳನ್ನು ಪೊಲೀಸ್ ಇಲಾಖೆಗೆ ನೀಡಬೇಕೆಂದು ರಾಷ್ಟ್ರೀಯ ಅಪರಾಧ ಸಂಗ್ರಹ ಕಂದ್ರ (ಎನ್‍ಸಿಆರ್‍ಬಿ) ಮುಖ್ಯಸ್ಥ ಇಶ್ ಕುಮಾರ್ ಅವರು ಒತ್ತಾಯಿಸಿದ್ದಾರೆ.
ಅಪರಾಧಿಗಳು ಹಾಗೂ ಅಪರಿಚಿತ ಶವಗಳನ್ನು ಗುರುತಿಸುವ ನಿಟ್ಟಿನಲ್ಲಿ ಆಧಾರ್ ಮಹತ್ವದ ಪಾತ್ರ ವಹಿಸುವ ನಿಟ್ಟಿನಲ್ಲಿ ಆಧಾರ್‍ದತ್ತಾಂಶದ ಸೀಮಿತ ಮಾಹಿತಿಗಳು ಪೊಲೀಸ್ ಇಲಾಖೆಗೆ ಸಿಗುವಂತೆ ಮಾಡಬೇಕು ಎಂದು ಅವರು ಹೈದರಾಬಾದ್‍ನಲ್ಲಿ ನಡೆದ ಕಾರ್ಯಗಾರವೊಂದರಲ್ಲಿ ತಿಳಿಸಿದ್ದಾರೆ.
ಆಧಾರ್ ಕಾರ್ಡ್ ಕಡ್ಡಾಯಗೊಳಿಸುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಿಗೇ ಪೊಲೀಸ್ ಇಲಾಖೆಯಿಂದ ಈ ಹೇಳಿಕೆ ಹೊರಬಿದ್ದಿದೆ.
ಒಂದು ಮೂಲದ ಪ್ರಕಾರ ದೇಶದಲ್ಲಿ ನಡೆಯುತ್ತಿರುವ ಶೇ. 80ರಿಂದ 85ರಷ್ಟು ಅಪರಾಧಗಳನ್ನು ಹೊಸಬರೇ ಮಾಡುತ್ತಿದ್ದಾರೆ. ವರ್ಷದಲ್ಲಿ 40 ಸಾವಿರ ಅಪರಿಚಿತ ಶವಗಳ ಪೊಲೀಸ್ ಇಲಾಖೆಗೆ ಸಿಗುತ್ತಿವೆ. ಇದಕ್ಕೆ ಪರಿಹಾರವಾಗಿ ಆಧಾರ್ ದತ್ತಾಂಶಗಳು ಪೊಲೀಸ್ ಇಲಾಖೆಗೆ ಸಿಗುವಂತೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.