ದಿನದ ಸುದ್ದಿ
ಬಡ ಕುಟುಂಬಗಳಿಗೆ ವರ್ಷಕ್ಕೆ 72 ಸಾವಿರ ರೂ ಅವರ ಖಾತೆಗೆ ಜಮಾ ಮಾಡಲಾಗುವುದು : ರಾಹುಲ್ ಗಾಂಧಿ
ಸುದ್ದಿದಿನ ಡೆಸ್ಕ್ : ನರೇಂದ್ರ ಮೋದಿ 2014 ರ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನ ಬ್ಯಾಂಕ್ ಖಾತೆಗೆ 15 ಲಕ್ಷರೂ ಹಾಕುತ್ತೇನೆ ಅಂತ ಸುಳ್ಳು ಹೇಳಿ ಜನತೆಗೆ ಮೋಸ ಮಾಡಿದ್ದಾರೆ. ಆದರೆ ನಾನು ಅಧಿಕಾರಕ್ಕೆ ಬಂದ ಕೂಡಲೆ ದೇಶದಲ್ಲಿರುವ ಕನಿಷ್ಠ ಶೇ20% ಬಡವರ ಅಕೌಂಟ್ ಗೆ ಕನಿಷ್ಟ ಆದಾಯ ಖಾತರಿ ಯೋಜನೆಯಡಿ ಹಣ ಹಾಕುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆಯ ಮಾತುಗಳನ್ನಾಡಿದ್ದಾರೆ.
ಯಮುನಗರ ಜಿಲ್ಲೆಯ ಜಗಧಾರಿಯಲ್ಲಿ ಮಾತನಾಡಿದ ಅವರು ನಾನು ಪ್ರಧಾನಿ ನರೇಂದ್ರ ಮೋದಿಯ ಹಾಗೆ ಸುಳ್ಳು ಹೇಳುವುದಿಲ್ಲ. ಅವರು ಹದಿನೈದು ಲಕ್ಷ ಹಾಕುತ್ತೇವೆ ಎಂದು ಹೇಳಿದಾಗ ನಾನು ಸಂತಸದಿಂದ ಇದ್ದೆ. ಆದರೆ ಮೋದಿ ಆಡಳಿತ ನೋಡಿ ಜನತೆ ಬೇಸರಾಗಿದ್ದಾರೆ. ಆದರೆ ನಾನು ಹೇಳಿ್ದದ ಹಾಗೆ ನಡೆಯುತ್ತೇನೆ. ಬಡವರ ಖಾತೆಗೆ ಹಣ ಹಾಕುವುದರ ಬಗ್ಗೆ ಕಾಂಗ್ರೆಸ್ ನ ಹಲವು ನಾಯಕರ ಜೊತೆ ಚರ್ಚಿಸಿದ್ದು, ಈ ಯೋಜನೆಯ ಬಗ್ಗೆ ಮೂರು ತಿಂಗಳು ಅಧ್ಯಯನ ನಡೆಸಿ ವರದಿ ನೀಡುತ್ತೇವೆ ಎಂದರು.
ಕಾಂಗ್ರೆಸ್ ಸರ್ಕಾರ ರಚನೆಯಾದ 6 ತಿಂಗಳೊಳಗೆ ಈ ಯೋಜನೆಯ ಫಲ ಜನತೆಗೆ ದೊರೆಯಲಿರುವ ಈ ಯೋಜನೆ ಒಂದು ಐತಿಹಾಸಿಕ ಯೋಜನೆಯಾಗಿದೆ. ತಿಂಗಳಿಗೆ 12 ಸಾವಿರ ರೂಗಿಂತ ಕಡಿಮೆ ಆದಾಯ ಹೊಂದಿರುವಂತಹ ಕುಟುಂಬಗಳಿಗೆ ಈ ಸೌಲಭ್ಯ ದೊರೆಯಲಿದ್ದು, ವರ್ಷಕ್ಕೆ 72 ಸಾವಿರ ರೂಗಳನ್ನು ಆ ಕುಟುಂಬಗಳ ಬ್ಯಾಂಕ್ ಖಾತೆಗೆ ಹಾಕಲಾಗುವುದಾಗಿ ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401