ಸಿನಿ ಸುದ್ದಿ

ಫ್ರಾನ್ಸ್‌ನಲ್ಲಿ ನಾಳೆಯಿಂದ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವ ಆರಂಭ

Published

on

ಸುದ್ದಿದಿನ ಡೆಸ್ಕ್ : ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವ ಫ್ರಾನ್ಸ್‌ನಲ್ಲಿ ನಾಳೆ ಆರಂಭವಾಗಲಿದೆ. 75ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ನೇತೃತ್ವದ ನಿಯೋಗ ಪಾಲ್ಗೊಳ್ಳಲಿದೆ.

ನಿಯೋಗದಲ್ಲಿ ಎ.ಆರ್. ರೆಹಮಾನ್, ನವಾಜುದ್ದೀನ್ ಸಿದ್ದಿಖಿ ಸೇರಿದಂತೆ ಚಲನಚಿತ್ರರಂಗದ ಹಲವಾರು ಪ್ರಮುಖರು ಇರಲಿದ್ದಾರೆ. ಫ್ರಾನ್ಸ್‌ನ ಕೇನ್ಸ್‌ನಲ್ಲಿ ವಾರ್ಷಿಕವಾಗಿ ನಡೆಯಲಿರುವ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಜಗತ್ತಿನಾದ್ಯಂತ ನಿರ್ಮಾಣಗೊಂಡ ಸಾಕ್ಷ್ಯಚಿತ್ರಗಳೂ ಸೇರಿದಂತೆ ಹಲವಾರು ಹೊಸ ಚಲನಚಿತ್ರಗಳ ವಿಮರ್ಶೆ ನಡೆಯಲಿದೆ. 1946ರಲ್ಲಿ ಆರಂಭವಾದ ಈ ಚಿತ್ರೋತ್ಸವ ಪ್ರತಿ ವರ್ಷ ನಡೆಯುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version