ದಿನದ ಸುದ್ದಿ

ಹೆಬ್ಬಾವಿನ ಹೊಟ್ಟೆಯಲ್ಲಿದ್ದ ಮಹಿಳೆ : ವೀಡಿಯೊ ನೋಡಿ..!

Published

on

ಸುದ್ದಿದಿನ ಡೆಸ್ಕ್ : ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಹೆಬ್ಬಾವು ನುಂಗಿದ್ದು, ಘಟನೆ ನಡೆದು ಕೆಲ ಹೊತ್ತಿನ ನಂತರ ನೋಡಿದ ಗ್ರಾಮಸ್ಥರು ಹೆಬ್ಬಾವನ್ನು ಕೊಂದು ಮಹಿಳೆ ದೇಹವನ್ನು ಹೊರ ತೆಗೆದಿದ್ದಾರೆ.

ಇಂಡೋನೇಷ್ಯಾದ ಮುನಾ ಐಸ್ಲ್ಯಾಂಡ್ ನ ಸುಲಾವೆಸಿ ಹತ್ತಿರದ ಪರ್ಸೀಪನ್ ಲಾಲಾ ಗ್ರಾಮದ ತೋಟದಲ್ಲಿ ಕೆಲಸ ಮಾಡುತ್ತಿದ್ದ 54 ವರ್ಷದ ಮಹಿಳೆ ವಾ ಟಿಬಾ ಎಂಬಾಕೆಯನ್ನು ಏಳು ಮೀಟರ್ ಉದ್ದದ (23 ಅಡಿ) ದೈತ್ಯ ಹೆಬ್ಬಾವೊಂದು ನುಂಗಿದೆ. ನಂತರ ಹೆಬ್ಬಾವಿನ ಹೊಟ್ಟೆ ಉಬ್ಬಿಕೊಂಡಿದ್ದನ್ನು ನೋಡಿದ ಪರ್ಸೀಪನ್ ಲಾಲಾ ಗ್ರಾಮದ ಸ್ಥಳೀಯರು ಅದರ ಹೊಟ್ಟೆ ತುಂಡರಸಿ ಮಹಿಳೆಯನ್ನು ಹೊರತೆಗೆದಿದ್ದಾರೆ. ಈ ಹೊತ್ತಿಗಾಗಲೇ ಮಹಿಳೆ ಮೃತಪಟ್ಟಿದ್ದಳು.

ಮಹಿಳೆ ಕೆಲಸ ಮಾಡುತ್ತಿದ್ದ ತೋಟದ ಹತ್ತಿರದಲ್ಲೇ ಬೃಹದಾಕಾರದ ಬಂಡೆಗಳು, ಗುಹೆ ಇದ್ದು, ಅದು ಹಾವುಗಳ ವಾಸಸ್ಥಾನವಾಗಿದೆ. ಹೆಬ್ಬಾವು ಮಹಿಳೆಯನ್ನು ನುಂಗಿದೆ ಎಂದು ಶಂಕಿಸಿದ ಸ್ಥಳೀಯರು ಅದರ ಹೊಟ್ಟೆ ಕತ್ತರಿಸಿದ್ದಾರೆ. ಆಗ ಮಹಿಳೆ ಮೃತ ದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ನಲ್ಲಿ ಆರು ಅಡಿ ಉದ್ದದ ಹೆಬ್ಬಾವುಗಳು ಪ್ರತಿದಿನವೂ ಕಾಣಿಸುವುದು ಸಾಮಾನ್ಯ. ಸಣ್ಣಪುಟ್ಟ ಪ್ರಾಣಿಗಳನ್ನು ಭೇಟಿಯಾಡುತ್ತವೆ. ಆದರೆ, ಮನುಷ್ಯರನ್ನು ನುಂಗಿರುಬುದು ಅಪರೂಪ. ಕಳೆದ ವರ್ಷ ಮಾರ್ಚ್ ನಲ್ಲಿ ಸಲೂಬಿರೊ ಗ್ರಾಮದಲ್ಲಿ ರೈತನೊಬ್ಬನನ್ನು ಹೆಬ್ಬಾವು ನುಂಗಿದ ಘಟನೆ ನಡೆದಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version